ಹುಬ್ಬಳ್ಳಿ ಪಿಎಸ್ಐ “ಸೀತಾರಾಮರ ‘ಕಲ್ಯಾಣ’ದ” ಮಾತು: ನಡುರಸ್ತೆಯಲ್ಲಿ ಮಹಿಳೆ ಏನು ಮಾಡಿದ್ಲು ಗೊತ್ತಾ…!?
1 min readಹುಬ್ಬಳ್ಳಿ: ಮಹಿಳೆಯೊಬ್ಬರಿಗೆ PSI ಒಬ್ಬರು ಅವಾಚ್ಯವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲಿಯೇ ಮಹಿಳೆ PSI ಗೇ ಕ್ಲಾಸ್ ತೆಗೆದುಕೊಂಡ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಶಾಲೆಯ ಬಳಿಯಲ್ಲಿ ನಡೆದಿದೆ.
ಉಪನಗರ ಠಾಣೆಯ PSI ಸೀತಾರಾಮ ಅವರು ಮಹಿಳೆಯೊಬ್ಬರಿಗೆ ನಿಮಗೂ ಅವರಿಗೂ ಏನು ಸಂಬಂಧ ಅಂತಾ ನಿಂತಿದ್ದ ಮಹಿಳೆಗೆ ಕೇಳಿದ್ದಾರೆ. PSI ಮಾತನ್ನು ಕೇಳಿದ ಮಹಿಳೆ ‘ಸರ್, ನೀವು ಏನು ಬಾಯಿಗೆ ಬಂದ ಹಾಗೆ ಮಾತಾಡುತ್ತೀರಾ,ನಮಗೂ ಅವರಿಗೂ ಏನು ಸಂಬಂಧ ಅಂತಾ ಕೇಳ್ತೀರಾ.. ನಿಮಗೆ ಏನು ಅನಿಸಲ್ವಾ, ಹೆಣ್ಣು ಮಕ್ಕಳ ಬಗ್ಗೆ ಹೇಗೆ ಬೇಕು ಹಾಗೆ ಮಾತಾಡುತ್ತೀರಿ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ. ನನ್ನ ಮೇಲೆ ಕೇಸ್ ಮಾಡ್ತೀರಾ.. ಮಾಡಿ.. ಎಂದು PSI ಸೀತಾರಾಮ ಅವರಿಗೆ ನಡುರಸ್ತೆಯಲ್ಲಿ ಮಹಿಳೆ ತರಾಟೆ ತೆಗೆದುಕೊಂಡಿದ್ದಾಳೆ.
ಮಹಿಳೆ ತರಾಟೆಗೆ ತೆಗೆದುಕೊಂಡ ಕೂಡಲೇ ಅದು ಹಾಗಲ್ಲ.. ಹೀಗಲ್ಲ ಅಂತಾ ಸಮಜಾಯಿಷಿ ಕೊಡಲು ಆರಂಭ ಮಾಡಿದ PSI ಜನರು ಸೇರುತ್ತಿದ್ದ ಹಾಗೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮಹಿಳೆಗೆ ಅವಾಚ್ಯವಾಗಿ ನಿಂದಿಸಿದ PSI ಮೇಲೆ ಹಿರಿಯ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.