“ಆ” ಮಹಿಳೆಗೆ ಕಿರುಕುಳ..? ಡಿಪಾರ್ಟಮೆಂಟಲ್ಲಿ ಏನಿದು ಗುಲ್ಲು : ಯಾ.. ರಾ.. ಕೆ..!

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿನ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆಂಬ ಮಾತುಗಳು ದೂರ ದೂರಿಂದ ಬರತೊಡಗಿದ್ದು, ಇಂದು ಇದೇ ವಿಷಯಕ್ಕೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಕೂಡಾ ಮಾತನಾಡಿದ್ರು.
ಹುಬ್ಬಳ್ಳಿಯಲ್ಲಿಂದು ಕಮೀಷನರೇಟ್ ವ್ಯಾಪ್ತಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿರುವ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಯಾವುದೇ ರೀತಿಯ ಆರೋಪ ಬಂದರೂ ತನಿಖೆ ಮಾಡುತ್ತೇವೆ. ಯಾವುದೇ ಹಂತದಲ್ಲಿಯಾದರೂ ಮಾಡುತ್ತೇವೆ ಎಂದರು.
ಅಸಲಿಗೆ ‘ಆ’ಮಹಿಳೆ ಯಾರೂ ಮತ್ತು ಯಾಕೆ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ, ಈಗಾಗಲೇ ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಹುಬ್ಬಳ್ಳಿ-ಧಾರವಾಡದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸೇವೆ ನೀಡಿದ ‘ಆ’ ಮಹಿಳೆಯ ಬಿಲ್ ನ್ನ ನೀಡದೇ ಸತಾಯಿಸುತ್ತಿದ್ದಾರಂತೆ.
ತಮ್ಮ ಬಿಲ್ ನ್ನ ನೀಡುವಂತೆ ಕೇಳಿಕೊಳ್ಳಲು ಕಚೇರಿಗೆ ಹೋದರೇ ಹಿಂಬದಿಯಿಂದ ಮನೆಗೆ ಹೋಗುತ್ತಾರಂತೆ. ಇತ್ತೀಚೆಗೆ ಈ ವಿವರ ಬೆಂಗಳೂರಿನ ಕೆಲವರಿಗೆ ತಲುಪಿ ಅವರೇ ನೇರವಾಗಿ ಆ ಅಧಿಕಾರಿಗೆ ಕಾಲ್ ಮಾಡಿ ಕೇಳಿದ್ರಂತೆ. ಕೇಳಿದ ಮೇಲೆ ಬೆದರಿದ ಅಧಿಕಾರಿ ತಮಗೆ ಪರಿಚಯವಿದ್ದ ರಾಜಕಾರಣಿಯ ಮೂಲಕ ‘ಆ’ ಮಹಿಳೆಗೆ ರಿಕ್ವೇಸ್ಟ್ ಮಾಡಿಕೊಂಡಿದ್ದಾರಂತೆ.
ಆದರೆ, ‘ಆ’ ಮಹಿಳೆ ಮಾತ್ರ ತಾನು ದುಡಿದ ಹಣವನ್ನ ಪಡೆಯದೇ ಬಿಡುವುದಿಲ್ಲವೆಂದು ಹಠ ಹಿಡಿದಿದ್ದು, ಅಧಿಕಾರಿಗಳ ಕಚ್ಚಾಟದಿಂದ ಈ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಇನ್ನೇನು ಈ ವಾರದಲ್ಲಿ ‘ಆ’ ಮಹಿಳೆಗೆ ಹಣ ಸಂದಾಯವಾಗದೇ ಇದ್ದರೇ ‘ಆ’ಕೆ ಎಲ್ಲರೆದುರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇಷ್ಟೇಲ್ಲ, ನಡೆದಿದ್ದು ಸತ್ಯವೋ ಸುಳ್ಳೋ ಎಂಬುದನ್ನ ಸಂಬಂಧಿಸಿದ ‘ಆ’ ಅಧಿಕಾರಿ ಮತ್ತು ಕಿರುಕುಳ ಅನುಭವಿಸಿದ ‘ಆ’ಮಹಿಳೆ ಹೇಳಬೇಕಷ್ಟೇ.. ಅಲ್ಲಿಯವರೆಗೂ ಎಲ್ಲರೂ ಓನ್ಲಿ ರೂಮರ್..