ಸರಕಾರಿ ವೈದ್ಯರ ಯಡವಟ್ಟು- 6ತಿಂಗಳು ಹೊಟ್ಟೆಯಲ್ಲಿ ಡ್ರೇಸಿಂಗ್ ಬಟ್ಟೆ ಬಿಟ್ಟಿದ್ದ ಪ್ರಕರಣ ಬೆಳಕಿಗೆ..
1 min readವಿಜಯಪುರ: ಆಸ್ಪತ್ರೆಗೆ ಬಂದಿದ್ದ ಬಾಣಂತಿಯ ಹೊಟ್ಟೆಯಲ್ಲಿ ಡ್ರೇಸಿಂಗ್ ಬಟ್ಟೆಯನ್ನೇ ಬಿಟ್ಟಿದ್ದ ಪ್ರಕರಣವೊಂದು ಆರು ತಿಂಗಳ ನಂತರ ಬೆಳಕಿಗೆ ಬಂದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾಸ್ಪತ್ರೆಯಲ್ಲಿ ನಡೆದಿದೆ.
ಮುದ್ದೇಬಿಹಾಳ ನಿವಾಸಿಯಾಗಿದ್ದ ಶಾಹಿನ್ ಉತ್ನಾಳ ಎಂಬ ಮಹಿಳೆ ಕಳೆದ ಆರು ತಿಂಗಳ ಹಿಂದೆ ಡೆಲಿವರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಗ, ಅತೀವ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಡ್ರೇಸಿಂಗ್ ಬಟ್ಟೆಯನ್ನ ಇಡಲಾಗಿತ್ತಂತೆ. ಆದರೆ, ತದನಂತರ ಆ ಬಟ್ಟೆಯನ್ನ ಅಲ್ಲಿಯೇ ಬಿಟ್ಟು ಆಪರೇಷನ್ ಮಾಡಿದ್ದರು.
ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೋದ ಕೆಲವು ದಿನಗಳ ನಂತರ ಹೊಟ್ಟೆನೋವಿನಿಂದ ಶಾಹಿನ್ ಬಳಲುತ್ತಿದ್ದಾರೆ. ಆಗಾಗ, ಹೊಟಟ್ಟೆ ನೋವು ಬರುವುದು ಸಹಜವೆಂದು ಸುಮ್ಮನೆನಿದ್ದವರು, ಹೊಟ್ಟೆನೋವು ಹೆಚ್ಚಾಗತೊಡಗಿದಾಗ ಮತ್ತೆ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.
ಹೊಟ್ಟೆನೋವಿನ ಬಗ್ಗೆ ಸ್ಕ್ಯಾನ್ ಮಾಡಿದಾಗ ಆರು ತಿಂಗಳ ಹಿಂದೆ ವೈದ್ಯರು ಮಾಡಿದ ಯಡವಟ್ಟು ಬೆಳಕಿಗೆ ಬಂದಿದೆ. ಈ ಘಟನೆಯಿಂದ ಕಂಗಾಲಾದ ಕುಟುಂಬ ಆಗೀನ ವೈದ್ಯರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗೆ ಕಾರಣವಾದವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹ ಮಾಡಿದ್ದಾರೆ.