Posts Slider

Karnataka Voice

Latest Kannada News

ಧಾರವಾಡದ ಮಹಿಳೆಯೀಗ ಸೇನೆಯಲ್ಲಿ ಲೆಪ್ಟಿನಂಟ್ ಜನರಲ್: ಕರ್ನಾಟಕದ ಹೆಮ್ಮೆಗೆ ಪೇಡಾನಗರಿ ಸಾಕ್ಷಿ

1 min read
Spread the love

ಧಾರವಾಡ: ಭಾರತೀಯ ಸೇನೆಯಲ್ಲಿ ಇತ್ತೀಚೆಗೆ ಮೂರು ಸ್ಟಾರ್ ಮೂಲಕ ಬಡ್ತಿ ಪಡೆದ ಲೆಪ್ಟಿನಂಟ್ ಜನರಲ್ ಡಾ. ಮಾಧುರಿ ಕಾನಿಟ್ಕರ್, ಈ ಬಡ್ತಿಯನ್ನ ಪಡೆದ ದೇಶದ ಮೂರನೇಯ ಮಹಿಳೆಯಾಗಿದ್ದು, ಇವರು ಧಾರವಾಡದವರಾಗಿದ್ದಾರೆ.

ಕರುನಾಡು ಹೆಮ್ಮೆಯಿಂದ ಹೇಳುವಂತೆ ಮಾಡಿದ ಕೀರ್ತಿಯನ್ನ ಡಾ.ಮಾಧುರಿ ಮಾಡಿದ್ದಾರೆ. ಈ ಹಿಂದೆ ಪುನೀತಾ ಅರೋರಾ ಮತ್ತು ಪದ್ಮಾ ಬಂಡೋಪಾಧ್ಯಾಯ ಹುದ್ದೆಯನ್ನ ಪಡೆದಿದ್ದರು.

ರಾಷ್ಟ್ರಪತಿಯಿಂದ ಸ್ವರ್ಣ ಪದಕ ಪಡೆದಿರುವ ಡಾ.ಮಾಧುರಿ 1960ರಲ್ಲಿ ಧಾರವಾಡದಲ್ಲಿ ಜನಸಿದ್ದರು. ಪುಣೆಯ ಸೇನಾ ವೈಧ್ಯಕೀಯ ಕಾಲೇಜಿಗೆ ಪುಣೆ ವಿವಿಗೆ ಮೊದಲಿಗರಾಗಿ ಪದವಿ ಪಡೆದದಿದ್ದರು.

1982ರಲ್ಲಿ ಸೇನೆ ಸೇರಿದ್ದ ಡಾ.ಮಧುರಿ, 1990ರಲ್ಲಿ ವೈಧ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿವಿಧ ಸೇನಾ ಆಸ್ಪತ್ರೆ ಹಾಗೂ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತವರು ಧಾರವಾಡಿಗರು ಅನ್ನುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.


Spread the love

Leave a Reply

Your email address will not be published. Required fields are marked *