ಧಾರವಾಡದಲ್ಲಿ “30 ಸಾವಿರ”ಕ್ಕಾಗಿ ಮಹಿಳೆಯ ಮೇಲೆ ‘ಸುತ್ತಿಗೆ’ಯಿಂದ ಹಲ್ಲೆ- Exclusive Video

ಧಾರವಾಡ: ಕೊಟ್ಟ ಸಾಲದ ಹಣವನ್ನ ಮರಳಿ ಪಡೆಯಲು ಹೋದ ಮಹಿಳೆಯೋರ್ವಳ ಮೇಲೆ ಸುತ್ತಿಗೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮೆಹಬೂಬನಗರದ ದೊಡ್ಡಮನಿ ಹಾಲ್ ಮುಂಭಾಗದಲ್ಲಿ ನಡೆದಿದೆ.
ಘಟನೆಯ ಎಕ್ಸಕ್ಲೂಸಿವ್ ಸಿಸಿಟಿವಿ ದೃಶ್ಯ
ಧಾರವಾಡದ ಆಝಾದನಗರದ ಫಾತೀಮಾ ಎಂಬಾಕೆ ಇಕಬಾಲ್ ಕುಂದಗೋಳ ಎಂಬಾತನಿಗೆ ಮೂವತ್ತು ಸಾವಿರ ರೂಪಾಯಿ ಸಾಲವನ್ನ ನೀಡಿದ್ದಳು. ಹಲವು ತಿಂಗಳುಗಳಿಂದ ಹಣ ಮರಳಿಸದೇ ಸತಾಯಿಸುತ್ತಿದ್ದ.
ಇದೇ ಕಾರಣಕ್ಕೆ ಇಂದು ಕೈಗೆ ಸಿಕ್ಕ ಇಕಬಾಲ್ ನನ್ನ ಹಿಗ್ಗಾ-ಮುಗ್ಗಾ ಹೀಯಾಳಿಸಿ ಮಾತಾಡಿದ್ದಾಳೆ. ಇದೇ ಕಾರಣಕ್ಕೆ ರೋಸಿ ಹೋದ ಆತ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹೊಡೆದಿದ್ದರಿಂದ, ಫಾತೀಮಾಳ ಸ್ಥಿತಿ ಚಿಂತಾಜನಕವಾಗಿದೆ. ಆಕೆಯನ್ನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಲಾಗಿದೆ.
ಉಪನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.