ಹೆಬ್ಬಳ್ಳಿಯಲ್ಲಿ “ಆಕೆ”ಯ ಸಾವು ತಪ್ಪಿಸಲು ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ಮಾಡಿದ್ದೇನು…!?
1 min readಧಾರವಾಡ: ಮನೆಯಲ್ಲಿ ನೀರು ತುಂಬಲು ಮೋಟಾರ ಆರಂಭಿಸಲು ಹೋದ ಮಹಿಳೆಗೆ ವಿದ್ಯುತ್ ತಗುಲಿ, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ ಗ್ರಾಮ ಪಂಚಾಯತಿ ಅಧ್ಯಕ್ಷೆಯೋರ್ವರು ಆಕೆಯನ್ನ ಬದುಕಿಸಲು ಹರಸಾಹಸ ಪಟ್ಟ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಶಶಿಕಲಾ ಸುರೇಶ ದಾಸರ ಎಂಬ ಮೂರು ಮಕ್ಕಳ ತಾಯಿಗೆ ನೀರು ತುಂಬುವ ಮೋಟಾರನಿಂದ ವಿದ್ಯುತ್ ತಗುಲಿತ್ತು. ವಿಷಯ ಗೊತ್ತಾದ ತಕ್ಷಣವೇ ಗ್ರಾಮ ಪಂಚಾಯತಿ ಅಧ್ಯಕ್ಷೆ ತೇಜಸ್ವಿನಿ ತಮ್ಮಾಜಿರಾವ್ ತಲವಾಯಿ ಅವರು, ತಮ್ಮದೇ ಕಾರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರು, ಕಿಮ್ಸಗೆ ಕರೆದುಕೊಂಡು ಹೋಗುವಂತೆ ಹೇಳಿದ ತಕ್ಷಣವೇ ಅಧ್ಯಕ್ಷೆ ತೇಜಸ್ವಿಯವರು, ಅಲ್ಲಿಗೂ ತೆಗೆದುಕೊಂಡು ಹೋಗಿದ್ದಾರೆ. ಆದರೆ, ದುರ್ವಿಧಿ ಮಹಿಳೆಯನ್ನ ಉಳಿಸುವಲ್ಲಿ ವಿಫಲವಾಗಿದೆ.
ಓರ್ವ ಮಹಿಳೆಯ ಪ್ರಾಣವನ್ನ ಉಳಿಸಲು ಗ್ರಾಪಂ ಅಧ್ಯಕ್ಷೆ ವಹಿಸಿದ ಶ್ರಮವನ್ನ ಗ್ರಾಮಸ್ಥರು ಸ್ಮರಿಸುತ್ತಿದ್ದಾರೆ.