ಹೆಚ್ಚು ದರದಲ್ಲಿ ಮದ್ಯ ಮಾರಾಟ: ವೈನ್ ಶಾಪ್ ಸೀಜ್
1 min readಬೀದರ: ಕೊರೋನಾ ಮಹಾಮಾರಿಯ ನಡುವೆಯೂ ದುಬಾರಿ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವೈನ್ ಶಾಪ್ ಮೇಲೆ ಅಬಕಾರಿ ಅಧಿಕಾರಿ ದಾಳಿ ಮಾಡಿದ್ದು, ವೈನ್ ಶಾಪ್ ಸೀಜ್ ಮಾಡಲಾಗಿದೆ.
ಬೀದರ್ ನಗರದ ಪ್ರೀತಿ ವೈನ್ ನಲ್ಲಿಯೇ ಮದ್ಯವನ್ನ ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದ್ದರು. 2499ರೂ.ಬೆಲೆಯ ಮದ್ಯವನ್ನ 2700 ರೂಪಾಯಿ ಪಡೆದಿದ್ದ ವೈನ್ ಮಾಲೀಕ. ಅಬಕಾರಿ ಉಪ ಆಯುಕ್ತ ಆನಂದ ಉಕ್ಕಲಿಯವರಿಂದ ಪ್ರಕರಣ ದಾಖಲು ಮಾಡಲಾಗಿದೆ.
ಕೊರೋನಾ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳಿಂದ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟದ ಹಲವು ದೂರುಗಳು ದಾಖಲಾಗಿದ್ದವು. ಹೆಚ್ಚುವರಿ ಹಣ ಪಡೆದಿದ್ದು ದಾಖಲೆ ಸಮೇತ ಸಿಕ್ಕಿ ಬಿದ್ದ ಪ್ರೀತಿ ವೈನ್ ವಿರುದ್ಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.