Posts Slider

Karnataka Voice

Latest Kannada News

Exclusive-ವೈನ್ಸಲ್ಲಿ ಪ್ರಶ್ನೆ ಮಾಡಿದ್ರೇ ಬೀಳತ್ತೆ ಗೂಸಾ: ಅಮ್ಮಿನಬಾವಿಯಲ್ಲಿ ನಡೆದಿದ್ದೇನು..!

Spread the love

ಧಾರವಾಡ: ವೈನ್ಸ್ ನಲ್ಲಿ ಹೆಚ್ಚಿಗೆ ಹಣ ಪಡೆಯುವುದು ಏಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲೂಕಿನ ದುರ್ಗಾ ವೈನ್ಸ್ ನಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸೆಪ್ಟಂಬರ್ 9 ರಂದು ಸಂಜೆ ನಡೆದ ಘಟನೆಯಲ್ಲಿ ಗ್ರಾಹಕ ದುರ್ಗಾ ವೈನ್ಸಗೆ ಬಂದು ಮದ್ಯವನ್ನ ಖರೀದಿಸುತ್ತಾನೆ. ಆಗ ಹಣವನ್ನ ಹೆಚ್ಚಿಗೆ ಪಡೆಯಲಾಗತ್ತೆ. ಇದನ್ನ ಪ್ರಶ್ನಿಸುತ್ತ ನಿಂತಿರುವಾಗ ದುರ್ಗಾ ವೈನ್ಸ್ ನ ಬಡಿಗೇರ ಎಂಬಾತ ಗ್ರಾಹಕನ ಕೈ ಹಿಡಿದು ಎಳೆದು ಹಲ್ಲೆ ಮಾಡುತ್ತಾನೆ. ಅಷ್ಟೇ ಅಲ್ಲ, ಕೌಂಟರಿನ ಮೇಲೆ ಹತ್ತಿ ಹೊಡೆಯಲು ಹೋಗಿ, ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಇಡೀ ಘಟನೆಯು ಸಿಸಿಟಿವಿಯಲ್ಲಿ ಚಿತ್ರೀತವಾಗಿದ್ದು, ಈ ವೀಡಿಯೋ ವೈರಲ್ ಆಗಿದೆ. ಮದ್ಯ ಸೇವನೆ ಮಾಡಿದ್ರೇ, ವೈನ್ಸ್ ನವರು ಎಷ್ಟು ಹೇಳುತ್ತಾರೋ ಅಷ್ಟು ಹಣವನ್ನ ಕೊಟ್ಟು ಬರಬೇಕು. ಇಲ್ಲದಿದ್ದರೇ ಬೀಳತ್ತೆ ಗೂಸಾ ಎನ್ನುವಂತಾಗಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು


Spread the love

Leave a Reply

Your email address will not be published. Required fields are marked *