ಲಂಚ-ಮಾಮೂಲಿ: ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಧಾರವಾಡ ವೈನ್ ಡೀಲರ್ಸ್…!
1 min readಧಾರವಾಡ: ತಮ್ಮ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಧಾರವಾಡ ವೈನ್ ಡಿಲರ್ಸ್ ಅಸೋಸಿಯೇಷನ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದು, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಹಲವು ದೂರನ್ನ ನೀಡಿದ್ದಾರೆ.
ಕೋವಿಡ್-19ನಿಂದ ಆಗಿರುವ ತೊಂದರೆಯನ್ನ ನಿಭಾಯಿಸಲು ಸರಕಾರ ಮುಂದಾಗಬೇಕು. ಹೆಚ್ಚಳ ಮಾಡಿರುವ ಅಬಕಾರಿ ಶುಲ್ಕವನ್ನ ಕೈಬಿಡುವಂತೆ ಕೋರಿದ ಪ್ರತಿಭಟನಾನಿರತರು, ಆನ್ ಲೈನ್ ಮಾರಾಟದ ಬಗ್ಗೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಅಬಕಾರಿ ಅಧಿಕಾರಿಗಳು ಲಂಚ-ಮಾಮೂಲಿ ವಸೂಲಿಗಾಗಿ ನೀಡುತ್ತಿರುವ ತೊಂದರೆ ಬಗ್ಗೆ ಈ ಹಿಂದೆಯೂ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೇ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿರುವವರನ್ನ ಜಿಲ್ಲೆಯಿಂದ ವರ್ಗಾವಣೆ ಮಾಡಿ ಎಂದು ಮನವಿ ಮಾಡಿಕೊಂಡರು.
ಪೊಲೀಸ್ ಇಲಾಖೆಯ ಹಸ್ತಕ್ಷೇಪದ ಬಗ್ಗೆಯೂ ಮನವಿಯಲ್ಲಿ ವಿವರಣೆ ನೀಡಲಾಗಿದೆ. ಪ್ರತಿಭಟನೆಯಲ್ಲಿ ಟಿ.ಎಂ.ಮೆಹರವಾಡೆ, ಸಂತೋಷ ಶೆಟ್ಟಿ, ಮಹೇಶ ಶೆಟ್ಟಿ, ಜೀವನ ಶೆಟ್ಟಿ, ಆನಂದ ಕಲಾಲ, ಆನಂದ ಕಠಾರೆ, ಅಮೃತ ಕಬಾಡಿ, ದೀಪಕ ಮಗಜಿಕೊಂಡಿ, ವಿಶ್ವನಾಥ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.