ಹುಬ್ಬಳ್ಳಿಯಲ್ಲೊಂದು ಅಪರೂಪದ ಪ್ರಕರಣ: ‘ಪತ್ನಿಯ’ “50”ನೇ ಬರ್ತಡೇಗಾಗಿ “50” ಕೆಜಿ ತೂಕ ಇಳಿಸಿಕೊಂಡ ‘ಪತಿರಾಯ’….

ಹುಬ್ಬಳ್ಳಿ: ತನ್ನ ಮಡದಿಯ ಸಂತೋಷಕ್ಕಾಗಿ ತನಗೆ ತಾನೇ ಸವಾಲು ತೆಗೆದುಕೊಂಡು ನೂರೇ ನೂರು ದಿನದಲ್ಲಿ ಐವತ್ತು ಕೆಜಿ ತೂಕ ಇಳಿಸಿಕೊಂಡು, ಪತ್ನಿಯ ಐವತ್ತನೇ ಬರ್ತಡೇಗೆ ಗಿಫ್ಟ್ ನೀಡಿದ ಅಪರೂಪದ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉದಯನಗರದ ನಿವಾಸಿ ಸಾಯಿಕುಮಾರ್ ಎಂಬುವವರೇ ತೂಕ ಇಳಿಸಿಕೊಂಡ ಪತಿಯಾಗಿದ್ದು, ಇವರ ಪತ್ನಿ ಗಾಯತ್ರಿ ಅವರು ನಿನ್ನೆ ಐವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಸಾಯಿಕುಮಾರ ನೃತ್ಯ ಮಾಡಿರುವ ವೀಡಿಯೋ ವೈರಲ್ ಆಗಿದೆ.
ಅಪರೂಪದ ವೀಡಿಯೋ…
ಸಾಯಿಕುಮಾರ ಅವರು 140 ಕೆಜಿ ತೂಕವನ್ನ ಹೊಂದಿದ್ದರು. ಇದೀಗ 90ಕೆಜಿಗೆ ಇಳಿದಿದ್ದಾರೆ. ಗಾಯತ್ರಿಯವರ ಹುಟ್ಟುಹಬ್ಬದ ಸಮಯದಲ್ಲಿ ಸಂಬಂಧಿಕರು, ಆಪ್ತರು ಭಾಗವಹಿಸಿ ಶುಭ ಹಾರೈಸಿದ್ದಾರೆ.