Posts Slider

Karnataka Voice

Latest Kannada News

‘ಗಂಡನ ಜೀವ’ ಹೋದ ಕ್ಷಣವೇ “ಆಕೆಯ ಉಸಿರು” ನಿಂತಿದೆ- ಕುಂದಗೋಳದಲ್ಲಿ ಆಗಿದ್ದೇನು..?

Spread the love

ಕುಂದಗೋಳ : ಪತಿ ಸಾವಿನ ಆಘಾತ ಪತ್ನಿಯೂ ಹೃದಯಾಘಾತದಿಂದ ಸಾವು

ಕುಂದಗೋಳ : ಸತಿ-ಪತಿಗಳು ಒಂದಾದ ಭಕ್ತಿ ಶಿವನಿಗೆ ಒಪ್ಪುವ ಮಾತಿನಂತೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

ಫೆರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬುವವರು ಇಂದು ಬೆಳಿಗ್ಗೆ 6-30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫೆರುದ್ಧೀನ್ ಪಠಾಣ್ (70) ಪತಿಯ ಸಾವಿನ ದು:ಖ ತಾಳಲಾರದೆ ಇಂದು ಸಾಯಂಕಾಲ 4 ಗಂಟೇಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದ್ದು ಸಾವಿನಲ್ಲೂ ಒಂದಾದ ಸತಿ ಪತಿಗಳ ಹೊಂದಾಣಿಕೆಗೆ ಇಡೀ ಕುಂದಗೋಳ ಪಟ್ಟಣವೇ ಕಂಬನಿ ಮಿಡಿಯುತ್ತಿದೆ.


Spread the love

Leave a Reply

Your email address will not be published. Required fields are marked *