ಮೂರು ತಿಂಗಳೂ.. 4964 ಕೇಸೂ.. 7147175 ಶುಲ್ಕವೂ.. 778800 ದಂಡವೂ.. ಯಾವ ಇಲಾಖೆ ಗೊತ್ತಾ..?
1 min readಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಾನೂನು ಮಾಪನಶಾಸ್ತ್ರ (ತೂಕ ಮತ್ತು ಅಳತೆ) ಇಲಾಖೆಯು ಜಿಲ್ಲೆ ವ್ಯಾಪ್ತಿಯಲ್ಲಿ 2020-21ನೇ ಸಾಲಿನ ದ್ವಿತೀಯ ತ್ರೈಮಾಸಿಕ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 4964 ಸಂಸ್ಥೆಗಳ ತೂಕ ಅಳತೆ ಸಾಧನಗಳನ್ನು ಪರಿಶೀಲಿಸಿ, ಮುದ್ರೆ ಹಾಕಿದ್ದು ಒಟ್ಟು 71ಲಕ್ಷ 47175 ರೂಪಾಯಿ ಸತ್ಯಾಪನೆ ಶುಲ್ಕವನ್ನ ಹಾಕಿದೆ.
ಕೋವಿಡ್-19 ರ ಹಿನ್ನೆಲೆಯಲ್ಲಿ ಮಾಸ್ಕ, ಸ್ಯಾನಿಟೈಜರ್, ಕಿರಾಣಿ ವಸ್ತುಗಳು ಹಾಗೂ ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಒಟ್ಟು 1299 ಅಂಗಡಿ ಸಂಸ್ಥೆಗಳಲ್ಲಿ ತಪಾಸಣೆ ಮಾಡಲಾಗಿದ್ದು, ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿ ಕಾಯ್ದೆಗಳ ವಿವಿಧ ಪ್ರಕರಣಗಳ ಉಲ್ಲಂಘನೆಗಾಗಿ 347 ಮೊಕದ್ದಮೆಗಳನ್ನು ಹೂಡಿ, 7ಲಕ್ಷ 78800 ರೂಪಾಯಿ ದಂಡವನ್ನ ಸಂಗ್ರಹಿಸಲಾಗಿದೆ.
ಕೊರೋನಾ ಸಮಯದಲ್ಲೂ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದ್ದವು ಎಂಬುದಕ್ಕೆ ಸಾಕ್ಷಿಯಾಗಿ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿವೆ.
ಹುಬ್ಬಳ್ಳಿ ವೃತ್ತದ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಮಧುಕರ ಘೋಡಕೆ ಈ ಮಾಹಿತಿಯನ್ನ ನೀಡಿದ್ದಾರೆ.