ಕಲಬುರಗಿ: ನೀರಲ್ಲಿ ಹೋದ ಮಹಿಳೆ ಶವವಾಗಿ ಪತ್ತೆ

ಕಲಬುರಗಿ: ಸೀತಾಫಲ ಹಣ್ಣನ್ನ ತರಲು ಬೆಟ್ಟಕ್ಕೆ ಹೋಗಿದ್ದ ಮಹಿಳೆಯೋರ್ವಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅವರಿವತ್ತು ಶವವಾಗಿ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮರಗುತ್ತಿ ತಾಂಡಾದ ಬಳಿಯ ಹಳ್ಳದಲ್ಲಿ ಶವಪತ್ತೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಲ್ಲಿಯೇ ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ಮಹಿಳೆ ಕೊಚ್ಚಿಕೊಂಡು ಹೋಗಿದ್ದರು.
ಮರಗುತ್ತಿ ತಾಂಡಾ ನಿವಾಸಿ ಶಾಂತಾಬಾಯಿ ಎಂಬುವವರೇ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಇಂದು ಬೆಳಿಗ್ಗೆಯಿಂದಲೂ ಹುಡುಕಾಟ ಮುಂದುವರೆದಾಗ ಹಳ್ಳದ ದಡದ ಮರದ ಕೊಂಬೆಯಲ್ಲಿ ಶವವಾಗಿ ಪತ್ತೆಯಾಗಿದೆ.
ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.