ಹುಬ್ಬಳ್ಳಿ ಸಮೀಪ ನೀರಲ್ಲಿ ಸಿಲುಕಿದ “32” ಜನ ಮೂವರು ಬಚಾವ್, ಓರ್ವ ನೀರು ಪಾಲು… Big Exclusive

ಹುಬ್ಬಳ್ಳಿ: ಬೇರೆ ಕಡೆ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ ತಾಲೂಕಿನ ಇಂಗಳಳ್ಳಿ ಬಳಿ ಹಳ್ಳ ಸಂಪೂರ್ಣವಾಗಿ ತುಂಬ ಹರಿಯುತ್ತಿದ್ದು, ಒಂದು ಕಡೆ 28 ಜನ ರೈತರು ಸಿಲುಕಿದ್ದಾರೆ. ಅದೇ ಹಳ್ಳದ ಇನ್ನೊಂದು ಭಾಗದಲ್ಲಿ ನಾಲ್ವರ ಪೈಕಿ ಓರ್ವ ನೀರು ಪಾಲಾದ ಘಟನೆ ಈಗಷ್ಟೇ ಸಂಭವಿಸಿದೆ.
Exclusive Video
ಇಂಗಳಳ್ಳಿ ಗ್ರಾಮದ ಇಪತ್ತೆಂಟು ಜನರು ಹೊಲಕ್ಕೆ ಹೋದಾಗ ಎರಡು ಭಾಗದಲ್ಲಿ ಹಳ್ಳ ಏರಿ ಬಂದ ಪರಿಣಾಮ, ಅವರು ನಡುವಿನಲ್ಲಿ ಸಿಲುಕಿದ್ದಾರೆ. ಇನ್ನೊಂದು ಭಾಗದಲ್ಲಿ ಬ್ಯಾಹಟ್ಟಿ ಗ್ರಾಮದಿಂದ ಇಂಗಳಳ್ಳಿಗೆ ಹೋಗುತ್ತಿದ್ದ ಆನಂದ ಹಿರೇಗೌಡರ ನೀರು ಪಾಲಾಗಿದ್ದಾನೆ.
ಘಟನೆಯ ವಿವರ ಸಿಗುತ್ತಿದ್ದ ಹಾಗೇ ಕ್ಷೇತ್ರದ ಶಾಸಕರು ಆಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರನ್ನ ಸ್ಥಳಕ್ಕೆ ಕಳಿಸಿ, ಎಲ್ಲರ ರಕ್ಷಣೆ ಮಾಡುವಂತೆ ಸೂಚನೆ ನೀಡಿದ್ದಾರೆ.