ಕಡ್ಲಿಗೆ ಎಣ್ಣಿ ಹೊಡೆದು ಕೈಕಾಲು ತೊಳೆಯುವಾಗ ಯುವಕ ನೀರುಪಾಲು- ಹುಡುಕಾಟದಲ್ಲಿ ಶಿರೂರು ಗ್ರಾಮಸ್ಥರು
1 min readಧಾರವಾಡ: ಕಡಲೆ ಹೊಲಕ್ಕೆ ಹುಳು ಆಗಿದೆಯಂದು ಎಣ್ಣಿ ಹೊಡೆದು ಕೈಕಾಲು ತೊಳೆದುಕೊಳ್ಳಲು ಹೋದಾಗ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ನೀರಿನಲ್ಲಿ ತೇಲಿ ಹೋಗಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದ ಬಳಿ ಸಂಭವಿಸಿದೆ.
ಹತ್ತೋಂಬತ್ತು ವಯಸ್ಸಿನ ವೀರೇಶ ಚಂದ್ರಯ್ಯ ಸಿದ್ಧಗಿರಿಮಠ ಎಂಬಾತನೇ ನೀರಿನಲ್ಲಿ ತೇಲಿ ಹೋಗಿದ್ದು, ಯುವಕನಿಗಾಗಿ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದು, ನವಲಗುಂದ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಲುವೆಯತ್ತ ಪೊಲೀಸರು ತೆರಳುತ್ತಿದ್ದಾರೆ.
ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಯುವಕ ವೀರೇಶ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಹೋಗಿ ಬರುವಾಗ ಕಾಲುವೆಯಲ್ಲಿ ಸ್ವಚ್ಚವಾಗಲು ಕೆಳಗೆ ಇಳಿದಿದ್ದ. ಆಯತಪ್ಪಿ ಕೆಳಗಡೆ ಬಿದ್ದಾಗ, ಈಜು ಬಾರದೇ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆಂದು ಹೇಳಲಾಗಿದೆ.
ಯುವಕ ಇಳಿದ ಜಾಗದಲ್ಲಿ ಹುಡುಕಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾಲುವೆಯ ಸುತ್ತಲೂ ಗ್ರಾಮಸ್ಥರು ತಡಕಾಟ ನಡೆಸಿದ್ದು, ಎಲ್ಲಿಯೂ ಸುಳಿವು ದೊರೆಯುತ್ತಿಲ್ಲ. ಮಾಹಿತಿ ಪಡೆದಿರುವ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿಗಳ ಜೊತೆಗೆ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆಂದು ಗೊತ್ತಾಗಿದೆ.