ಕನ್ನಡದ ಕಟ್ಟಾಳು ವಾಟಾಳ ನಾಗರಾಜ್ ಪತ್ನಿ ವಿಧಿವಶ: ನಾಳೆ ಅಂತ್ಯಕ್ರಿಯೆ
ಬೆಂಗಳೂರು: ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ರವರ ಧರ್ಮಪತ್ನಿ ಜ್ಞಾನಾಂಬಿಕೆರವರು ಇಂದು ಸಂಜೆ ಘಂಟೆಗೆ ಶೇಷಾದ್ರಿ ಪುರಂ ನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರ ಪಾರ್ಥಿವ ಶರೀರವನ್ನ ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಕೊಂಡೊಯ್ಯಲಾಗುವುದು.
ಬುಧವಾರ ಬೆಳಗ್ಗೆ 9-00 ಘಂಟೆಗೆ ಬೆಂಗಳೂರಿನಿಂದ ಹೊರಟು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ 16 ಗ್ರಾಮದ ಜಮೀನಿನಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.