Posts Slider

Karnataka Voice

Latest Kannada News

ಬಾಲಿವುಡ್ ಸಂಗೀತ ನಿರ್ದೇಶಕ, ಹಾಡುಗಾರ ವಾಜೀದ ಖಾನ ಸಾವು: ಮರುಗಿದ ಬಾಲಿವುಡ್

1 min read
Spread the love

ಮುಂಬೈ: ಪ್ರಸಿದ್ಧ ಸಂಗೀತ ನಿರ್ದೇಶಕ ಜೋಡಿಯ ಸಾಜೀದ-ವಾಜೀದರ ಪೈಕಿ ವಾಜೀದ ತಮ್ಮ 42ನೇಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜೀದ ಕೊರೋನಾ ಲಾಕ್ ಡೌನ್ ಸಮಯದಲ್ಲೂ ಸಲ್ಮಾನಖಾನಗಾಗಿ ಭಾಯ್ ಭಾಯ್ ಹಾಡು ರಚನೆ ಮಾಡಿ ಎಲ್ಲರ ಮನಸೆಳೆದಿದ್ದರು.

ಸಲ್ಮಾನಖಾನ ಅಭಿನಯದ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ ಸಿನೇಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಜೀದ-ವಾಜೀದ ಬ್ರದರ್ಸ್ ಮತ್ತೆ ಹೊರಳಿ ನೋಡುವ ಪ್ರಸಂಗ ಬರದಂತೆ ಒಂದರ ಮೇಲೊಂದು ಹಿಟ್ ಸಂಗೀತ ನೀಡುತ್ತಿದ್ದರು.  ಸಲ್ಮಾನ ಖಾನರ ಬಹುತೇಕ ಸಿನೇಮಾಗಳಿಗೆ ಇವರದ್ದೇ ಸಂಗೀತ ಇರುತ್ತಿತ್ತು. ದಂಬಾಂಗ್ ನ ಮೂರು ಸಿನೇಮಾಗಳಿಗೆ ಇವರದ್ದೇ ಸಂಗೀತವಿತ್ತು.

ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜೀದರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ವಾಜೀದರ ಸಾವಿನಿಂದ ಬಹುಮುಖ ಪ್ರತಿಭೆಯನ್ನ ಕಳೆದುಕೊಂಡತಾಗಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಟ್ವಿಟ್ ಮಾಡಿದ್ದು, ಬಹುತೇಕ ಬಾಲಿವುಡ್ ಕಣ್ಣೀರಾಕಿದೆ.


Spread the love

Leave a Reply

Your email address will not be published. Required fields are marked *