ನಿನ್ನ ಜೀವಸಹಿತ ಬಿಡೋದಿಲ್ಲ.. ವಿಶ್ವವಿದ್ಯಾಯಲಯದಲ್ಲೇ ಕೊಲೆಗೆ ಸಂಚು..? ಎಕ್ಸಕ್ಲೂಸಿವ್ ವೀಡಿಯೋ..
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಆವಾಂತರ ನಡೆದಿದ್ದು, ಸಸ್ಯಶಾಸ್ತ್ರ ವಿಭಾಗದ ಎಚ್ ಓ ಡಿ ಡಾ.ಜಿ.ಎಂ ವಿದ್ಯಾಸಾಗರ ಮೇಲೆ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಸ್ ಪಿ ಮೇಲಕೇರಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಸಸ್ಯಶಾಸ್ತ್ರ ವಿಭಾಗದಲ್ಲಿರುವ ಕಚೇರಿಗೆ ಬಂದು ಹಲ್ಲೆ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಹಲ್ಲೆಗೊಳಗಾದ ಡಾ.ಜಿ.ಎಂ. ವಿದ್ಯಾಸಾಗರ ಅವರು, ಎಸ್.ಪಿ.ಮೇಲಕೇರಿ ಮತ್ತು ಡಾ.ಪ್ರತಿಮಾ ಮಠ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಪ್ರೊ. ಎಸ್. ಪಿ.ಮೇಲಕೇರಿ ಸಹೋದರ ಪುತ್ರ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಪಿಲ್ ಮಾಡುತ್ತಿದ್ದಾನೆ. ಆತನ ವಿಚಾರದಲ್ಲಿ ಬಂದು ಪ್ರೊ.ಎಸ್.ಪಿ. ಮೇಲಕೇರಿ ಹಲ್ಲೆ ಮಾಡಿದ್ದಾರೆಂದು ಡಾ. ವಿದ್ಯಾಸಾಗರ ಕಲಬುರಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆಂದು ಡಾ.ಪ್ರತಿಮಾ ಮಠ ವಿರುದ್ಧವೂ ದೂರು ದಾಖಲು ಮಾಡಿದ್ದು, ಡಾ.ಪ್ರತಿಮಾ ಮಠ, ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಾದ್ಯಾಪಕಿಯಾಗಿದ್ದಾರೆ. ದೂರಿನಲ್ಲಿ ಹಲ್ಲೆ ಮಾಡುವುದರ ಜೊತೆಗೆ ಜೀವ ಬೆದರಿಕೆ ಹಾಕಿರೋದಾಗಿ ಡಾ.ವಿದ್ಯಾಸಾಗರ ಆರೋಪಿಸಿದ್ದಾರೆ.