VRL ಬಸ್ಸಿನಲ್ಲಿ 97ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ… ಹುಬ್ಬಳ್ಳಿಯ ಓರ್ವನ ಬಂಧನ, ಮತ್ತೋರ್ವ ಪರಾರಿ…!!!
1 min readಧಾರವಾಡ: ದಾಖಲೆಗಳಿಲ್ಲದ 97ಲಕ್ಷಕ್ಕೂ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಗುರುವಾರ ಮುಂಜಾನೆ ಪೂನಾ-ಬೆಂಗಳೂರ ರಸ್ತೆಯಲ್ಲಿನ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ವಿಕಾಸಕುಮಾರ ವಿಕಾಸ ಹೇಳಿದರು.
ವೀಡಿಯೋ ಸಂಪೂರ್ಣವಾಗಿ ನೋಡಿ…
ನಗರದಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಮೂಲದ ಭವರಸಿಂಗ್ ವಿಜಯಸಿಂಗ್ ಚವ್ಹಾಣ ಮತ್ತು ನರಪತ್ ಸಿಂಗ್ ರತನಸಿಂಗ್ ಬಾಲೋತ್ ಎಂಬುವರನ್ನು ಬಂಧಿಸಲಾಗಿದೆ ಎಂದರು.
ಧಾರವಾಡ ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ನೇತೃತ್ವದಲ್ಲಿನ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ದಾಖಲೆಯಿಲ್ಲದ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ.
ಖಾಸಗಿ ಮಾಲಿಕತ್ವದ ವಿಜಯಾನಂದ ಟ್ರಾವೆಲ್ಸ್ ನ ಬಸ್ (ನಂ.ಜಿಎ.-07, ಟಿ.2538)ನ್ನು ನರೇಂದ್ರ ಕ್ರಾಸ್ ಬಳಿ ಬೆಳಗ್ಗೆ 9.35 ರ ಸುಮಾರಿಗೆ ತಪಾಸಣೆ ನಡೆಸಿದಾಗ ಬ್ಯಾಗ್ ನಲ್ಲಿ ಇಡಲಾಗಿದ್ದ
1237 ಗ್ರಾಂ. ಚಿನ್ನದ ಆಭರಣ, 15.174 ಕಿ.ಗ್ರಾಂ ಬೆಳ್ಳಿ ಆಭರಣ, ಬಿಸ್ಕಿಟು, ನಾಣ್ಯಗಳು ಸೇರಿ ಒಟ್ಟು 97,97, 64 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಡಿಎಸ್ ಪಿ ಎಸ್.ಎಂ.ನಾಗರಾಜ, ಸಿಪಿಐಗಳಾದ ಶಿವಾನಂದ ಕಮತಗಿ, ಪ್ರಮೋದ ಯಲಿಗಾರ, ಶಿವಾನಂದ ಕಟಗಿ, ರವಿಕುಮಾರ ಕಪ್ಪತನವರ ಇತರರರು ಸುದ್ದಿಗೋಷ್ಠಿಯಲ್ಲಿದ್ದರು.