Posts Slider

Karnataka Voice

Latest Kannada News

ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗೆ ಪ್ರತಿಷ್ಠಿತ ಪ್ರಶಸ್ತಿ ಗರಿ…!!!

Spread the love

ಪೂರೈಕೆ ಸರಪಳಿ ಹಾಗೂ ಸಾರಿಗೆಯಲ್ಲಿನ ಶ್ರೇಷ್ಠತೆಗಾಗಿ ಸಪ್ಲೆ ಚೈನ್ ಆೃಂಡ್ ಲಾಜಿಸ್ಟಿಕ್ಸ್ ಎಕ್ಸಲೆನ್ಸ್ ಅವಾರ್ಡ್ಸ್ (ಸ್ಕೇಲ್)-2025

ಹುಬ್ಬಳ್ಳಿ: ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗೆ ದೇಶದ ಪ್ರತಿಷ್ಠಿತ ಕಾನ್ಫಿಡರೇಶನ್ ಆ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೊಡಮಾಡುವ ಸಪ್ಲೈ ಚೈನ್ ಆೃಂಡ್ ಲಾಜಿಸ್ಟಿಕ್ಸ್ ಎಕ್ಸಲೆನ್ಸ್
ಅವಾರ್ಡ್ಸ್ (ಸ್ಕೇಲ್)- 2025 ಪ್ರಶಸ್ತಿ ಲಭ್ಯವಾಗಿದೆ. ತನ್ಮೂಲಕ ಈಗಾಗಲೇ ಹತ್ತಾರು ಗೌರವ, ಸನ್ಮಾನಗಳಿಗೆ ಪಾತ್ರವಾಗಿರುವ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ವಿಶೇಷ ಗರಿ ಮೂಡಿದಂತಾಗಿದೆ.
ಸಿಐಐ ಇನ್‌ಸ್ಟಿಟ್ಯೂಟ್ ಆ್ ಲಾಜಿಸ್ಟಿಕ್ಸ್ ಸ್ಕೇಲ್ ಅವಾರ್ಡ್ಸ್ ಟೀಂ ಹೈದ್ರಾಬಾದ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ 12ನೇ ಆವೃತ್ತಿಯ ಪ್ರಶಸ್ತಿಯನ್ನು ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗೆ ನೀಡಿ ಗೌರವಿಸಲಾಯಿತು.


ಪೂರೈಕೆ ಸರಪಳಿ ಹಾಗೂ ಸಾರಿಗೆಯಲ್ಲಿನ ಶ್ರೇಷ್ಠತೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ದೇಶದ ಜನರಿಗೆ ಸಂಸ್ಥೆಯು ನಿರಂತರವಾಗಿ ನೀಡುತ್ತಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ತೀರ್ಪುಗಾರರ ಸಮಿತಿಯು ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಅನ್ನು ಆಯ್ಕೆ ಮಾಡಿದೆ ಎಂದು ಸಿಐಐ ತಿಳಿಸಿದೆ.
ಪ್ರತಿಷ್ಠಿತ ಈ ಗೌರವ ಬಂದಿರುವುದು ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ಪೂರೈಕೆ ಸರಪಳಿ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿನ ಉತ್ಕೃಷ್ಟತೆ, ನಾವೀನ್ಯತೆಯನ್ನು ಮತ್ತೊಮ್ಮೆ ಶ್ರುತಪಡಿಸಿವೆ.
ಸಾರಿಗೆ ಕ್ಷೇತ್ರದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ದಶಕಗಳಿಂದ ಮಾಡಿದ ಸಾಧನೆ, ಯಶಸ್ಸಿನ ಪಯಣವು ಇತರ ಪೂರೈಕೆ ಸರಪಳಿ ಸೇವಾ ಕ್ಷೇತ್ರದವರಿಗೆ ಸ್ಫೂರ್ತಿದಾಯಕವಾಗಿದೆ. ಈ ಸಾಧನೆಯ ಜತೆಗೆ ಸಂಸ್ಥೆಯ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳು ಸಂಸ್ಥೆಯಿಂದ ಆಗಲಿ, ಇತರರಿಗೆ ಪ್ರೇರಣೆ ನೀಡಲಿ ಎಂದು ಸಿಐಐ ತಂಡ ಆಶಿಸಿದೆ.


Spread the love

Leave a Reply

Your email address will not be published. Required fields are marked *

You may have missed