ಯುಜಿಸಿ ಪೇ ಸ್ಕೇಲ್ ನವರು ಮತ ಹಾಕಲು ಹಣ ಪಡೆಯುತ್ತಾರೆ: ರವಿಕುಮಾರ

ಬೆಂಗಳೂರು: ಇಂದಿನ ಚುನಾವಣೆಯಲ್ಲಿ ಮತ ಹಾಕುವಾಗ ಯುಜಿಸಿ ಪೇ ಸ್ಕೇಲ್ ಹೊಂದಿದವರು ಹಣ ಪಡೆಯುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು.
ವಿಧಾನಪರಿಷತ್ ನಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮತದಾರರು ಚುನಾವಣೆಯಲ್ಲಿ ಹಣ ಪಡೆದು ಮತ ಹಾಕುವುದೇ ಹೆಚ್ಚು ಎಂದರು. ಇದಕ್ಕೆ ದನಿಗೂಡಿಸಿದ ಎಸ್.ಆರ್. ಪಾಟೀಲ ಒಂದು ಪೋಸ್ಟಲ್ ಮತ ಹಾಕಲು ಐದಾರು ಸಾವಿರ ಕೇಳ್ತಾರೆ ಎಂದರು. ಆಗ ಮಧ್ಯೆದಲ್ಲಿ ಮಾತನಾಡಿದ ಎನ್.ರವಿಕುಮಾರ, ಯುಜಿಸಿ ಪೇ ಸ್ಕೇಲ್ ನ ಜನರೇ ಹಣ ಪಡೆಯುತ್ತಿದ್ದಾರೆಂದು ಇವತ್ತಿನ ಸನ್ನಿವೇಶವನ್ನ ಬಹಿರಂಗವಾಗಿಯೇ ಹೇಳಿದರು.