ಧಾರವಾಡ ಎಂಎಲ್ಸಿ ಚುನಾವಣೆ: 370 ಜನಪ್ರತಿನಿಧಿಗಳಿಗೆ ಓಟು ಹೇಗೆ ಹಾಕೋದೆಂಬುದೇ ಗೊತ್ತಿಲ್ಲ…!

ಧಾರವಾಡ: ಅಖಂಡ ಧಾರವಾಡ ಜಿಲ್ಲೆಯ ವಿಧಾನಪರಿಷತ್ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಮತದಾನವನ್ನ ಮಾಡಬೇಕಿದ್ದು, ಸುಮಾರು 370 ಮತಗಳು ಕುಲಗೆಟ್ಟಿವೆ.

ಸಾರ್ವಜನಿಕರಿಂದ ಗೆದ್ದು ಬಂದವರು ಎಷ್ಟೊಂದು ಜಾಣರಿದ್ದಾರೆ ಎಂಬುದು ಈ ಮೂಲಕ ಗೊತ್ತಾಗಿದೆ. ಒಬ್ಬರು ಎರಡು ಮತಗಳನ್ನ ಹಾಕಬೇಕಾಗಿತ್ತು. 1 ಮತ್ತು 2 ನ್ನ ಬರೆಯಬೇಕಿತ್ತು. ಆದರೆ, ಹಲವರು ಇಬ್ಬರಿಗೂ 1.. 1.. ಎಂದು ಬರೆಯುವ ಮೂಲಕ ತಮ್ಮ ಅಜ್ಞಾನವನ್ನ ತೋರಿಸಿದ್ದಾರೆ.
ಒಟ್ಟು 7450 ಮತಗಳ ಪೈಕಿ 370 ಮತಗಳು ಕುಲಗೆಟ್ಟಿವೆ ಎಂಬುದು ಸೋಜಿಗ ಮೂಡಿಸುತ್ತಿದೆ. ತಾವೇ ಮತ ಹೇಗೆ ಹಾಕಬೇಕೆಂದು ಗೊತ್ತಿಲ್ಲದವರು ಇನ್ನೇನು ಅಧಿಕಾರ ನಡೆಸುತ್ತಾರೋ ಎಂದು ಕುಹಕವಾಡುವಂತಾಗಿದೆ.