ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹುಟ್ಟಿದೂರಿನಲ್ಲಿಂದು ಮತದಾನ ಮಾಡಿದ್ರು…!
1 min readನವಲಗುಂದ: ತಾಂತ್ರಿಕ ಕಾರಣಗಳಿಂದ ಮುಂದೂಡಿಕೆಯಾಗಿದ್ದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನದಲ್ಲಿಂದು ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರು ದಂಪತಿ ಸಮೇತ, ಅಮರಗೋಳ ಗ್ರಾಮದಲ್ಲಿ ಮತದಾನ ಮಾಡಿದರು.
ಹೋಳಿಹುಣ್ಣಿಮೆಯ ಬಣ್ಣದ ನಡುವೆಯೇ ನಡೆದ ಮತದಾನದಲ್ಲಿ ಭಾಗವಹಿಸಿದ ಶಾಸಕರು, ಹಕ್ಕು ಚಲಾಯಿಸಿದರು. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನ ಗೆಲ್ಲಿಸಬೇಕೆಂದು ಕೋರಿದರು.
ಮತದಾನ ಮಾಡಿದ ನಂತರ ಗ್ರಾಮದವರೊಂದಿಗೆ ಕೆಲಕಾಲ ಸಮಯ ಕಳೆದ ಶಾಸಕರು, ಚುನಾವಣೆ ಫಲಿತಾಂಶದ ನಂತರ, ಯಾರೇ ಗೆದ್ದರೂ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಕೇಳಿಕೊಂಡರು.