“ವಿಕೆ ಬಾಸ್- ಡಿ ಬಾಸ್” ಸಮ್ಮಿಲನ- ಮಕ್ಕಳೊಂದಿಗೆ “ಯಜಮಾನ” ಹೇಗಿದ್ದರು ಗೊತ್ತಾ..? ಸವಾರಿಯ ಎಕ್ಸಕ್ಲೂಸಿವ್ ವಿಡೀಯೋ…
ಧಾರವಾಡ: ಚಿತ್ರನಟ ದರ್ಶನ ಕೊರೋನಾ ಸಮಯದಲ್ಲೂ ವಿದ್ಯಾನಗರಿಯಲ್ಲಿ ಹವಾ ಮಾಡಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜೊತೆ ಸಾಕಷ್ಟು ಸಮಯವನ್ನ ಕಳೆದು, ಹಾಯಾಗಿದ್ದಾರೆ.
ಈ ಮೊದಲಿಂದಲೂ ವಿನಯ ಕುಲಕರ್ಣಿಯವರ ಬಳಿ ಬರುವ ನಟ ದರ್ಶನ, ಡೈರಿಯಲ್ಲಿರುವ ಪ್ರಾಣಿಗಳೊಂದಿಗೆ ಸಮಯ ಕಳೆದಿದ್ದೆ. ಆದರೆ, ಇವತ್ತು ಹೊಸ ತಳಿಯ ಎತ್ತಿನೊಂದಿಗೆ ಚಕ್ಕಡಿ ಓಡಿಸಿದ್ದು ವಿಶೇಷವಾಗಿತ್ತು.
ಉತ್ತರ ಕರ್ನಾಟಕದಲ್ಲಿ ಎಲ್ಲೂ ಕಾಣದ ತಳಿಯೊಂದಿಗೆ ಚಕ್ಕಡಿಯಾನ ಮಾಡಿದ ನಂತರ ವಿನಯ ಕುಲಕರ್ಣಿ ಮಕ್ಕಳೊಂದಿಗೆ ಸಾಕಷ್ಟು ಸಮಯವನ್ನ ದರ್ಶನ ಕಳೆದರು. ಉತ್ಸುಕರಾದಂತೆ ಕಂಡು ಬಂದ ಕುಲಕರ್ಣಿಯವರ ಮಕ್ಕಳು, ದರ್ಶನರೊಂದಿಗೆ ಖುಷಿಯ ಸಮಯವನ್ನ ಕಳೆದರು.
ಯಾವುದೇ ಅಹಃಯಿಲ್ಲದೇ ತಾನೊಬ್ಬ ಸ್ಟಾರ್ ನಟ ಎಂಬುದು ಬೇರೆಯವರ ಗಮನಕ್ಕೂ ಬಾರದಂತೆ ಅಂತ್ಯತ ಸರಳವಾಗಿ ನಡೆದುಕೊಂಡ ದರ್ಶನ, ಎಲ್ಲರ ಮನಸ್ಸೆಳೆದರು.