ವಿನೋದ ಅಸೂಟಿ ಗೆಲುವು ಬಹುತೇಕ ಖಚಿತ- ಮಧ್ಯಾಹ್ನದಲ್ಲೇ ಸೊರಗಿದ ‘ಸೋನಾರ’

ಧಾರವಾಡ: ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ವಿನೋದ ಅಸೂಟಿಯವರೇ ಮತ್ತೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಇಂದು ನಡೆದ ಆನ್ ಲೈನ್ ಮತದಾನದಲ್ಲಿ ಜಿಲ್ಲೆಯ ಎಲ್ಲ ಭಾಗಗಳಲ್ಲಿ ನಡೆದ ಮತದಾನಕ್ಕಿಂತ ಹೆಚ್ಚು ಮತದಾನ ನವಲಗುಂದ ಕ್ಷೇತ್ರದಲ್ಲಿಯೇ ನಡೆದಿದೆ. ಅಷ್ಟೇ ಅಲ್ಲ, ಸೋನಾರ ಪರವಾಗಿ ಮತ ಚಲಾವಣೆ ಕೂಡಾ ಸಾಕಷ್ಟು ತೊಂದರೆ ಅನುಭವಿಸಿದ್ದಾರೆನ್ನುವುದು ಲೆಕ್ಕಾಚಾರ.
ಇಂದು ನಡೆದ ಮತದಾನದಲ್ಲಿ ವಿನೋದ ಅಸೂಟಿ ಪರವಾಗಿಯೇ ಹೆಚ್ಚು ಮತದಾನ ನಡೆದಿದ್ದು, ಮತ್ತೋಮ್ಮೆ ವಿನೋದ ಅಸೂಟಿಯೇ ಅಧ್ಯಕ್ಷರಾಗುತ್ತಾರೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.
ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಈಗಾಗಲೇ ವಿನೋದ ಅಸೂಟಿ ಚಿರಪರಿಚಿತರಾಗಿದ್ದು, ಈಗಾಗಲೇ ನವಲಗುಂದ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದರು.