ಬಿಜೆಪಿಗರ ವಿರುದ್ಧ ಹರಿಹಾಯ್ದ “ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ”…

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗಲೇ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿಯವರು, ಬಿಜೆಪಿಯವರ ಮೇಲೆ ಹರಿಹಾಯ್ದಿದ್ದಾರೆ.

ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರು ನಗರಕ್ಕೆ ಭೇಟಿ ನೀಡಿದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು, ಸಾವರ್ಕರ್ ಭಾವಚಿತ್ರ ಹಿಡಿದುಕೊಂಡು ಪ್ರತಿಭಟನೆಗೆ ಮುಂದಾದ ಕೆಲವೇ ಕ್ಷಣದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿಯವರು, ಆಕ್ರೋಶವ್ಯಕ್ತಪಡಿಸಿದರು.
ವಿನೋದ ಅವರು ಮುಂದೆ ಹೋಗುವುದನ್ನ ಪೊಲೀಸರು ತಡೆದಾಗಲೂ, ಬಿಜೆಪಿಯವರನ್ನ ಸುಮ್ಮನೆ ಕೂಡಿಸಿ ಎಂದು ಎಚ್ಚರಿಸಿದರು. ಈ ಸಮಯದಲ್ಲಿ ವಾಗ್ವಾದ ನಡೆಯಿತು.