Posts Slider

Karnataka Voice

Latest Kannada News

ವಿನೋದ ಅಸೂಟಿ ನೇತೃತ್ವದಲ್ಲಿ ಸಿಎಂಗೆ ಮನವಿ: ಹೋರಾಟದ ಎಚ್ಚರಿಕೆ

1 min read
Spread the love

ನವಲಗುಂದ: ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಆಗಿರುವ ಪ್ರಮಾದವನ್ನ ಸರಿಪಡಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿದ ವಿನೋದ ಅಸೂಟಿ, ಸರಕಾರ ಕ್ರಮ ಜರುಗಿಸದೇ ಇದ್ದರೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನವಲಗುಂದ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ,  ಆರ್ ಎಚ್ ಕೋನರಡ್ಡಿ,  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ನವಲಗುಂದ ತಾಲೂಕಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಮಂಜು ಹಂಡಿ, ವೆಂಕಮ್ಮ ಚಾಕಲಬ್ಬಿ, ಮೌನೇಶ ರೇವಣ್ಣನವರ, ನಾರಾಯಣ ರಂಗರಡ್ಡಿ,  ಮಹಾದೇವ ಚುಂಚನೂರ, ಬಡೇಸಾಬ ದೇವರಿಡು ಸೇರಿದಂತೆ ರೈತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಸರಕಾರಕ್ಕೆ ಸಲ್ಲಿಸಿದ ಮನವಿ ಪ್ರತಿ

ಗೆ

ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು

ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ ವಿಧಾನಸೌದ

ಬೆಂಗಳೂರು

   ವಿಷಯ: ನವಲಗುಂದ ತಾಲೂಕಿನಾಧ್ಯoತ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರೈತರು ಬೆಳೆದ ಬೆಳೆ ಹಾಗೂ ರಸ್ತೆ ಮನೆಗಳು ಹಾನಿಯಾಗಿದ್ದು ಈ ಬಗ್ಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸುವ ಕುರಿತು.

ಮಾನ್ಯರೆ,

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದ ಧಾರವಾಡ-ಜಿಲ್ಲಾ-ಯುಥ್-ಕಾಂಗ್ರೆಸ್-ಅಧ್ಯಕ್ಷ  ವಿನೋದ ಅಸೂಟಿ ಇವರ ನೇತೃತ್ವದಲ್ಲಿ  ಧಾರವಾಡ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ನವಲಗುಂದ ತಾಲೂಕಾ ಕಿಸಾನ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ನವಲಗುಂದ ತಾಲೂಕಿನಾಧ್ಯಂತ 2020 ಆಗಸ್ಟ್ ಮೊದಲ ವಾರದಲ್ಲಿ ಅತಿಯಾದ ಮಳೆಯಿಂದ ಪ್ರವಾಹ ಬಂದು ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳದಿಂದಾದ 4000 ಸಾವಿರ ಎಕರೆ ರೈತರ ಜಮೀನಿನಲ್ಲಿ ಬೆಳೆದ ಹೆಸರು ಹತ್ತಿ ಗೋವಿನಜೋಳ ಈರುಳ್ಳಿ ಮೆಣಸಿನಕಾಯಿ ಸೇರಿದಂತೆ ಇತರ ಮುಂಗಾರು ಬೆಳೆಗಳು ನಾಶವಾಗಿದೆ ಮತ್ತು ತಾಲೂಕಿನಲ್ಲಿ ಸಾವಿರಾರು ಮನೆಗಳು ಭಾಗಶಃ ಸಂಪೂರ್ಣ ಬಿದ್ದಿರುತ್ತದೆ. ನೂರಾರು ಕೀಮಿ ರಸ್ತೆಗಳು ಹಾಳಾಗಿದ್ದು ಸುಮಾರು ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿರುತ್ತವೆ ಅದಕ್ಕಾಗಿ ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ಗಮನ ನೀಡಿ ಬೆಳೆಹಾನಿಗೆ 1 ಎಕರೆ ರೂ 50 ಸಾವಿರ ಹಾಗೂ ಮನೆ ಹಾನಿಗೆ ಸಂಪೂರ್ಣ ಬಿದ್ದ ಮನೆಗೆ 10 ಲಕ್ಷ ಭಾಗಶ ಬಿದ್ದ ಮನೆಗೆ 2 ಲಕ್ಷ ಅಲ್ದೆ ಬಿದ್ದ ಮನೆಗೆ 1 ಲಕ್ಷ ಪರಿಹಾರವನ್ನು ವಿತರಿಸಿ ಪ್ರವಾಹದಿಂದ ಹಾನಿಯಾದ ರಸ್ತೆ ಸೇತುವೆಗಳನ್ನು ಸರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

ಜಿಲ್ಲೆಯಾಧ್ಯಂತ ಯೂರಿಯಾ ರಸಗೊಬ್ಬರದ ಅಭಾವ ಇದ್ದು ಕೂಡಲೇ ಸರಿಪಡಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಈ ಮನವಿ ಮೂಲಕ ವಿನಂತಿಸಿಕೊಳ್ಳುತ್ತೇವೆ.


Spread the love

Leave a Reply

Your email address will not be published. Required fields are marked *