ರೈತರಿಗಾಗಿ ಸರಕಾರಕ್ಕೆ ಮನವಿ ಸಲ್ಲಿಸಿದ ವಿನೋದ ಅಸೂಟಿ ಪಡೆ
ಅಣ್ಣಿಗೇರಿ: 2019 ರ ಮುಂಗಾರು ಬೆಳೆ ವಿಮೆಯನ್ನ ಬಿಡುಗಡೆ ಮಾಡಬೇಕು ಹಾಗೂ ಆಶಾ ಕಾರ್ಯಕರ್ತರಿಗೆ ಮಾಸಿಕ ವೇತನ ಹೆಚ್ಚಿಸಿ ಆರೋಗ್ಯ ಭದ್ರತೆ ನೀಡಬೇಕೆಂದು ಆಗ್ರಹಿಸಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ನೇತೃತ್ವದಲ್ಲಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಜನತೆ 2019ರ ಬೆಳೆ ವಿಮೆ ಹಣವನ್ನ ತುಂಬಿದ್ದರೂ ಅವರಿಗೆ ಹಣ ಬಂದಿಲ್ಲ. ಅತಿವೃಷ್ಟಿಯಾಗಿ ಬೆಳೆ ಸಂಪೂರ್ಣ ಹಾಳಾಗಿದೆ. ಇದನ್ನ ಗಮನಿಸಿ ವಿಮೆ ಹಣವನ್ನ ನೀಡಬೇಕು.
ರಾಜ್ಯದಲ್ಲಿ ಹಗಲಿರುಳು ದುಡಿಯುತ್ತಿರುವ ಆಶಾ ಕಾರ್ಯಕರ್ತರಿಗೆ 12 ಸಾವಿರ ರೂಪಾಯಿ ವರೆಗೆ ವೇತನ ಹೆಚ್ಚಿಸಬೇಕು. ಆರೋಗ್ಯ ಭದ್ರತೆಗಾಗಿ ಸರಕಾರದ ವತಿಯಿಂದ ಉಚಿತವಾಗಿ ವಿಮಾ ಸೌಲಭ್ಯವನ್ನ ಕೊಡಬೇಕೆಂದು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮುತ್ತಣ್ಣ ಶಿವಳ್ಳಿ, ಸದುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.