ವಿನಯ ಕುಲಕರ್ಣಿಗೆ ಜಾಮೀನು ಸಂತೋಷ ಲಾಡ ನಿವಾಸದಲ್ಲಿ ಸಿಹಿ ನೀಡಿ ಸಂಭ್ರಮ…!

ಕಲಘಟಗಿ: ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದಲ್ಲಿರುವ ಮಾಜಿ ಸಚಿವ ಸಂತೋಷ ಲಾಡ ಅವರ ನಿವಾಸದಲ್ಲಿ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಜಾಮೀನು ಅರ್ಜಿಗೆ ಸ್ಪಂಧನೆ ದೊರಕಿದ ಕೆಲವೇ ಕ್ಷಣಗಳಲ್ಲಿ ಲಾಡ ಅವರ ಅಮೃತ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರಮುಖರು ಇದೇ ಸಮಯದಲ್ಲಿ ಸಿಹಿಯನ್ನ ಒಬ್ಬರಿಗೊಬ್ಬರು ನೀಡಿ, ಸಂತಸವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ ಮುರಳಿ, ಲಾಡ ಅವರ ಆಪ್ತ ಕಾರ್ಯದರ್ಶಿಗಳಾದ ಹರೀಶಂಕರ, ಸೋಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.