ತಲೀ ಹಿಡ್ದ್ ಹೋಗೈತಿ, ಮಂದಿಗೀ ಬ್ಯಾಸ್‌ರೆದ್ದ ಹೋಗೀರಿ- ಧಾರವಾಡ ಪೊಲೀಸರ ಬಗ್ಗೆ MLA ವಿನಯ ಕುಲಕರ್ಣಿ ಬೇಸರ…

ಕಿತ್ತೂರ: ಪೊಲೀಸರಿಂದ ಕಿರಿಕಿರಿ ಬಹಳ ಆಗಿದೆ. ಬೇರೆ ಕೆಲಸವೇ ಇಲ್ಲ. ರಸ್ತೆಯಲ್ಲಿ ನಿಲ್ಲೋದು ಹಣ ಹೊಡೆಯುವುದೇ ಆಗಿದೆ. ಬಂದ್ ಮಾಡಿ ಇದನ್ನ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.
ವೀಡಿಯೋ…
ಪೊಲೀಸರಿಗೆ ಬೇರೆ ಉದ್ಯೋಗವೇ ಇಲ್ಲ. ಗಾಡಿ ಹಿಡಿಯೋದು ದುಡ್ಡು ವಸೂಲಿ ಮಾಡೋದು. ರೋಡ್‌ಗೆ ನಿಂತು ಲೂಟಿ ಮಾಡೋ ಪರಿಸ್ಥಿತಿ ಆಗಿದೆ ಎಂದು ವಿನಯ್ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.
ಟಂ ಟಂ ಗೆ ಐದು – ಹತ್ತು ಸಾವಿರ ದಂಡ ಹಾಕತೀರಿ. ಒಂದು ಆಟೋಗೆ 12 ಸಾವಿರ ದಂಡ ಹಾಕೀರಿ. ನೀವು ದಾಖಲೆ ಚೆಕ್ ಮಾಡಿ ಅಭ್ಯಂತರ ಇಲ್ಲ. ಎಲ್ಲ ಇದ್ದರೂ ಒಂದು ಹಿಡಕೊಂಡು ಕೂರ್ತಿರಿ. ತಲೆ ಹಿಡಿದು ಹೋಗಿದೆ ಮಂದಿಗೆ ಬೇಸತ್ತು ಹೋಗಿದ್ದೀರಿ ಎಂದು ವಿನಯ್ ಕುಲಕರ್ಣಿ ಗರಂ ಆದರು.