ಪಂಚಮಸಾಲಿ ಹೋರಾಟಕ್ಕೆ ಧ್ವನಿಗೂಡಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ..!
1 min readಬೆಂಗಳೂರು: ಪಂಚಮಸಾಲಿ ಸಮುದಾಯವನ್ನ 2ಎ ಮೀಸಲಾತಿಗೆ ಸೇರಿಸುವಂತೆ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಹೋರಾಟದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಪತ್ನಿ ಹಾಗೂ ಮಗಳು ಭಾಗವಹಿಸಿದ್ದರು.
ಸಮಾವೇಶ ಆರಂಭಗೊಂಡ ಕೆಲವು ಸಮಯದ ನಂತರ ಆಗಮಿಸಿದ ಮಾಜಿ ಸಚಿವ ವಿನಯ ಕುಲಕರ್ಣಿಯವರ ಪತ್ನಿ ಶಿವಲೀಲಾ ಹಾಗೂ ಮಗಳನ್ನ ಸ್ವಾಗತಿಸಲಾಯಿತು. ಇದೇ ಸಮಯದಲ್ಲಿ ಮಾತನಾಡಿದ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳು, ವಿನಯ ಕುಲಕರ್ಣಿಯವರು ಆದಷ್ಟು ಬೇಗನೇ ಸಂಕಷ್ಟದಿಂದ ಹೊರಗೆ ಬರಲಿ ಎಂದರು.
ವಿನಯ ಕುಲಕರ್ಣಿಯವರು ಸಮಾಜದ ಹೋರಾಟ ನಡೆಯುವಾಗ, ಹೇಳಿದ ಮಾತುಗಳನ್ನ ಸ್ಮರಿಸಿಕೊಂಡ ಮಹಾಸ್ವಾಮಿಗಳು, ಇಂದಿನ ಹೋರಾಟದಲ್ಲಿ ಭಾಗವಹಿಸಿದ ಕುಟುಂಬದವರಿಗೆ ನಿಮ್ಮೇಲ್ಲರ ಆಶೀರ್ವಾದ ಇರಲಿ ಎಂದರು.
ಕೆಲಕಾಲ ಸಮಾವೇಶದಲ್ಲಿ ಕುಳಿತಿದ್ದ ಶಿವಲೀಲಾ ಕುಲಕರ್ಣಿ ಹಾಗೂ ಅವರ ಮಗಳು, ತದನಂತರ ಸ್ವಾಮೀಜಿಗಳ ಆಶೀರ್ವಾದ ಪಡೆದು ಅಲ್ಲಿಂದ ತೆರಳಿದರು.