ವಿನಯ ಕುಲಕರ್ಣಿ ಅರ್ಜಿ ವಿಚಾರಣೆ ದಿನವೇ, ಅವರ “ಪಿಎ”ರನ್ನ ವಶಕ್ಕೆ ಪಡೆದ ಸಿಬಿಐ…!

ಗದಗ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಇಂದು ಬೆಳಗಿನ ಜಾವ ಗದಗನ ಎಪಿಎಂಸಿ ಕ್ವಾಟರ್ಸನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕರನ್ನ ಸಿಬಿಐ ಬಂಧನ ಮಾಡಿದೆ.
ಮಾಜಿ ಸಚಿವ ವಿನಯ ಕುಲಕರ್ಣಿಯವರು ಸಚಿವರಿದ್ದ ಸಮಯದಲ್ಲಿ ಆಪ್ತ ಸಹಾಯಕರಾಗಿದ್ದ ಸೋಮಶೇಖರ ನ್ಯಾಮಗೌಡ ಎಂಬುವವರನ್ನೇ ವಶಕ್ಕೆ ಪಡೆದ ಸಿಬಿಐ ತಂಡ, ವಿಚಾರಣೆಗಾಗಿ ಧಾರವಾಡಕ್ಕೆ ಕರೆ ತರುತ್ತಿದ್ದಾರೆ.
ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಈ ಹಿಂದೆಯೂ ಹಲವು ಬಾರಿ ಸೋಮಶೇಖರ ಅವರನ್ನ ವಿಚಾರಣೆಗೆ ಸಿಬಿಐ ಮಾಡಿತ್ತು. ಹತ್ಯೆಯಾದ ಸಮಯದಲ್ಲಿ ನಡೆದ ಹಲವು ಮಾಹಿತಿಯನ್ನ ಕಲೆ ಹಾಕಿತ್ತು.
ಇಂದು ವಶಕ್ಕೆ ಪಡೆದ ನಂತರ ಸೋಮಶೇಖರ ಅವರನ್ನ ಬಂಧನ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಮಧ್ಯಾಹ್ನದ ವರೆಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ.