ವಿನಯ ಕುಲಕರ್ಣಿ ಜಾಮೀನಿನ ದಿನ ಹುಟ್ಟಿದ ಮಗುವಿಗೆ ‘ವಿನಯ ಹೆಸರು’…!

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರು ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಜಾಮೀನಾಗಿದ್ದ ದಿನವೇ ಜನ್ಮ ತಾಳಿದ ಅಭಿಮಾನಿಯೋರ್ವರ ಮಗನಿಗೆ ವಿನಯ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಧಾರವಾಡ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಯಾದವಾಡ ಗ್ರಾಮದ ಬಸವರಾಜ ಬೆಂಡಿಗೇರಿ ಎಂಬುವವರೇ ತಮ್ಮ ಮಗನಿಗೆ ವಿನಯ ಎಂದು ನಾಮಕರಣ ಮಾಡುವ ಮೂಲಕ ತಮ್ಮ ಪ್ರೀತಿಯನ್ನ ತೋರಿಸಿದ್ದಾರೆ.
ವಿನಯ ಕುಲಕರ್ಣಿ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ದಿನವೇ ಜನಿಸಿದ ನವಜಾತ ಶಿಶುವಿಗೆ ವಿನಯ ಎಂದು ನಾಮಕರಣ ಮಾಡಲಾಗಿದೆ. ಗ್ರಾಮೀಣ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ತಮ್ಮ ವರ್ಚಸ್ಸನ್ನ ಹೊಂದಿರುವುದು ಈ ಮೂಲಕ ಗೊತ್ತಾಗುತ್ತಿದೆ.