ವಿನಯ ಕುಲಕರ್ಣಿ ಜಾಮೀನು- ಜನೇವರಿ 20ಕ್ಕೆ ಮುಂದೂಡಿದ ಹೈಕೋರ್ಟ
1 min readಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ವಿಚಾರಣೆಯನ್ನ ಧಾರವಾಡ ಹೈಕೋರ್ಟ ಜನೇವರಿ 20ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಕೋರಿ ಧಾರವಾಡ ಹೈಕೋರ್ಟಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನ ನಡೆಸಿದ ಹೈಕೋರ್ಟ, ವಿಚಾರಣೆಯನ್ನ ಮುಂದೂಡಿದೆ.
ಕಳೆದ ವರ್ಷದ ನವೆಂಬರ್ 5ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ಬಂಧನ ಮಾಡಿದ್ದು, ಅವರನ್ನ ಮೂರು ದಿನದ ಕಸ್ಟಡಿ ಪಡೆದು ವಿಚಾರಣೆಯನ್ನ ನಡೆಸಿತ್ತು. ತದನಂತರ ಅವರನ್ನ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನವನ್ನ ಅನುಭವಿಸುತ್ತಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ವಿನಯ ಕುಲಕರ್ಣಿ ಪರ ವಕೀಲರು, ಅಲ್ಲಿ ಅರ್ಜಿಯನ್ನ ವಜಾ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.