ಎದೆ ಹಾಲು ಕುಡಿದವರು ಉಳಿದಿಲ್ಲ… ನಿಜ..! ಹಗಲು ರಾತ್ರಿ ಸಾರಾಯಿ ಕುಡಿಯೋರು ಉಳಿತಾರಾ..!?

ಧಾರವಾಡ: ವಿಧಾನಸಭೆಗೆ ಚುನಾವಣೆ ಇನ್ನೂ ಆರೇಳು ತಿಂಗಳು ಇರುವಾಗಲೇ ಧಾರವಾಡ-71 ಕ್ಷೇತ್ರದಲ್ಲಿ ಕಾವು ನಿನ್ನೆಯಿಂದ ಜೋರಾಗಿಯೇ ಆರಂಭವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅತಿರೇಕಕ್ಕೆ ಹೋಗತೊಡಗಿದೆ.

ಬಿಜೆಪಿಯ ಹಾಲಿ ಶಾಸಕ ಅಮೃತ ದೇಸಾಯಿ ಅವರು ನಿನ್ನೆಯ ಸಂಕಲ್ಪ ಸಭೆಯಲ್ಲಿ ಹೇಳಿದ್ದ ಮಾತುಗಳನ್ನೇ ಬಳಕೆ ಮಾಡಿ, ಅವರ ವಿರುದ್ಧ ಹೇಳಿಕೆಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಶಾಸಕ ಅಮೃತ ದೇಸಾಯಿ ಅವರು ನಿನ್ನೆ ಮಾತಾಡಿದ ವೀಡಿಯೋ ಇಲ್ಲಿದೆ ನೋಡಿ…
ಮಾಜಿ ಸಚಿವ ವಿನಯ ಕುಲಕರ್ಣಿಯವರ ಸಪೋಟರ್ಸ್ ಪೇಜಿನಲ್ಲಿ, ಅಮೃತ ದೇಸಾಯಿ ಅವರಿಗೆ ಟಿಕೆಟ್ ಸಿಗೋದೆ ಡೌಟು ಎಂದು ಬರೆಯಲಾಗಿದೆ.