ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಪ್ರಕರಣ : ಜಾರ್ಜಸೀಟ್ ಸಲ್ಲಿಸಿದ ಸಿಬಿಐ..!
ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿಯ ಭಾರತೀಯ ಜನತಾ ಪಕ್ಷದ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಂಧನವಾಗಿ 90 ದಿನಗಳು ಪೂರೈಸುವ ಮುನ್ನವೇ ಸಿಬಿಐ ಜಾರ್ಜಸೀಟ್ ನ್ನ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಕಳೆದ ನವೆಂಬರ್ 5ರಂದು ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿತ್ತು. ನಂತರ ಮೂರು ದಿನದವರೆಗೆ ಕಸ್ಟಡಿಗೆ ಪಡೆದು ವಿಚಾರಣೆಯನ್ನ ನಡೆಸಿತ್ತು. ಇದೀಗ ಫೆಬ್ರುವರಿ 5ರಂದು 90 ದಿನಗಳು ಮುಗಿಯಲಿದ್ದು, ಅದರೊಳಗೆ ಜಾರ್ಜಸೀಟ್ ಸಲ್ಲಿಕೆಯಾಗಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಭಾರತೀಯ ಜನತಾ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಜೂನ್ 15, 2016ರಂದು ನಡೆದಿತ್ತು. ಇದಾದ ನಂತರ ಹಲವು ಘಟನಾವಳಿಗಳು ನಡೆದಿದ್ದವು. ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ವಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣವನ್ನ ರಾಜ್ಯ ಸರಕಾರ ಸಿಬಿಐಗೆ ಒಪ್ಪಿಸಿತ್ತು.
ಸಿಬಿಐ ವಿಚಾರಣೆಯನ್ನ ಕೈಗೆತ್ತಿಕೊಂಡ ನಂತರ ಹತ್ಯೆಯ ಹಿಂದೆ ಹಲವು ರೀತಿಯ ಪ್ರಕರಣಗಳು ಬೆಳಕಿಗೆ ಬಂದವು. ಅಷ್ಟೇ ಅಲ್ಲ, ಹತ್ಯೆಗೆ ಸುಫಾರಿ ನೀಡಲಾಗಿತ್ತೆಂಬ ಅಂಶವೂ ಬಯಲಿಗೆ ಬಂದಿತ್ತು.
ಇಷ್ಟೇಲ್ಲ ನಡೆಯುತ್ತಿದ್ದಾಗಲೇ ಮಾಜಿ ಸಚಿವರನ್ನ ಬಂಧನ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ವಿನಯ ಕುಲಕರ್ಣಿಯವರ ಮಾವ ಚಂದ್ರಶೇಖರ ಇಂಡಿಯವರನ್ನ ಬಂಧನ ಮಾಡಲಾಗಿದೆ.
ಇದೀಗ ಮಹತ್ವದ ಬೆಳವಣಿಗೆಯಲ್ಲಿ ಸಿಬಿಐ ತನ್ನ ಜಾರ್ಜಸೀಟನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಯಾವ ಯಾವ ಅಂಶಗಳನ್ನ ಜಾರ್ಜಸೀಟಲ್ಲಿ ನಮೂದು ಮಾಡಿದ್ದಾರೆಂಬುದು ತಿಳಿದು ಬರಬೇಕಿದೆ.