ನಾಳೆ ವಿನಯ ಕುಲಕರ್ಣಿ ಬೇಲ್ ಭವಿಷ್ಯ ನಿರ್ಧಾರ…!?

ಬೆಂಗಳೂರು: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ನಾಳೆ ಬೇಲ್ ಸಿಗುವುದೋ ಇಲ್ಲವೋ ಎಂಬುದು ಖಚಿತವಾಗಿ ನಿರ್ಧಾರವಾಗಲಿದ ಎಂದು ಹೇಳಲಾಗಿದೆ.
ಕಳೆದ ಒಂದು ವಾರದಲ್ಲಿ ಮೂರನೇಯ ಬಾರಿಗೆ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ನಾಳೆಗೆ ಅಂತಿಮವಾಗಿ ನಿರ್ಧಾರವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದೆ.
ಈಗಾಗಲೇ ವಿನಯ ಕುಲಕರ್ಣಿ ಅವರ ಪರವಾಗಿರುವ ವಕೀಲ ಶಶಿಕಿರಣ ಶೆಟ್ಟಿಯವರು ತಮ್ಮ ವಾದವನ್ನ ಮಂಡಿಸಿದ್ದು, ನಾಳೆಗೂ ಕೂಡಾ ತಮ್ಮ ವಾದವನ್ನ ಮಂಡನೆ ಮಾಡಲಿದ್ದಾರೆ.
ಇಂದು ನಡೆದಿದ್ದ ವಿಚಾರಣೆಯನ್ನ ನಾಳೆಗೆ ಮುಂದೂಡಿದ್ದರಿಂದ ನಾಳೆ ಏನಾಗಲಿದೆ ಎಂಬುದರ ಬಗ್ಗೆ ಎಲ್ಲರಲ್ಲೂ ಕೌತುಕ ಮೂಡಿದೆ.