ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ…!
1 min readಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯನ್ನ ವಜಾ ಮಾಡಲಾಗಿದೆ.
ಬೆಂಗಳೂರಿನ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ಎರಡು ಕಡೆಯ ವಾದ-ಪ್ರತಿವಾದವನ್ನ ಆಲಿಸಿದ್ದ ನ್ಯಾಯಾಧೀಶರು, ತೀರ್ಪನ್ನ ಪ್ರಕಟಿಸಿದ್ದು, ಜಾಮೀನು ಅರ್ಜಿಯನ್ನ ವಜಾ ಮಾಡಿದೆ.
ಧಾರವಾಡ ನ್ಯಾಯಾಲಯದಿಂದ ಪ್ರಕರಣ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋದ ನಂತರವೂ, ಜಾಮೀನು ವಜಾಗೊಂಡಿದ್ದು, ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಂಧನ ಮುಂದುವರೆಯಲಿದೆ.
ನವೆಂಬರ್ 5ರಂದು ಸಿಬಿಐನಿಂದ ಬಂಧಿತರಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಹಿಂಡಲಗಾ ಜೈಲಿನಲಿಡಲಾಗಿದ್ದು, ಇದೀಗ ಬೇಲ್ ವಜಾ ಆಗಿದ್ದರಿಂದ ಅಲ್ಲಿಯೇ ಕಾಲವನ್ನ ಕಳೆಯಬೇಕಾಗಿದೆ.