ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ 9ತಿಂಗಳು 14ದಿನಕ್ಕೆ ಜಾಮೀನು…

ರಾಜಧಾನಿಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಾಕ್ಷ್ಯನಾಶ ಪ್ರಕರಣಕ್ಕೂ ದೊರೆತ ಜಾಮೀನು. ಜೈಲಿಂದ ಬಿಡುಗಡೆಗೆ ಕ್ಷಣಗಣನೆ…
ಬೆಂಗಳೂರು: ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಸಾಕ್ಷ್ಯನಾಶ ಪ್ರಕರಣದಲ್ಲೂ ಜಾಮೀನು ದೊರಕಿದ್ದು, ಇನ್ನೇನು ಹಿಂಡಲಗಾ ಕಾರಾಗೃಹದಿಂದ ವಿನಯ ಕುಲಕರ್ಣಿ ಬಿಡುಗಡೆ ಹೊಂದಲಿದ್ದಾರೆ.

ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಕಳೆದ ವರ್ಷ ನವೆಂಬರ್ ಐದರಂದು ಬಂಧನ ಮಾಡಿತ್ತು. ನಂತರದ ಬೆಳವಣಿಗೆಯಲ್ಲಿ ಹತ್ಯೆ ಪ್ರಕರಣದಲ್ಲಿ ವಿನಯ ಕುಲಕರ್ಣಿಯವರಿಗೆ ಜಾಮೀನು ಕಳೆದ ವಾರ ಸಿಕ್ಕಿತ್ತು. ಇದೀಗ ಸಾಕ್ಷ್ಯ ನಾಶ ಪ್ರಕರಣದಲ್ಲೂ ಜಾಮೀನು ದೊರಕಿದೆ.
ಸಿಬಿಐನಿಂದ ಬಂಧಿತರಾದ ನಂತರ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ ಕುಲಕರ್ಣಿಯವರಿಗೆ ಈ ಮೂಲಕ ಬಿಡುಗಡೆ ಭಾಗ್ಯ ದೊರೆತಿದ್ದು, ನ್ಯಾಯಾಲಯ ಹಲವು ಸೂಚನೆಗಳನ್ನ ನೀಡಿದೆ.
ಹುಬ್ಬಳ್ಳ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ವಿನಯ ಕುಲಕರ್ಣಿಯವರು ಬಿಡುಗಡೆ ಆಗುತ್ತಿರುವುದು, ಚುನಾವಣೆಯ ಮೇಲೆ ಸಾಕಷ್ಟು ಪ್ರಭಾವ ಬೀಳಲಿದೆ.