ಬೆಳಗಿನ ಹೊತ್ತು ನೈಟಿ ಹಾಕಿದ್ರೇ ದಂಡ: ವಿಚಿತ್ರ ನಿಯಮ ಮೀರಿದರೇ 2ಸಾವಿರ ದಂಡ

ಹೈದರಾಬಾದ: ಆಂದ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರ ನಿಯಮವನ್ನ ಜಾರಿಗೆ ತರಲಾಗಿದ್ದು, ಬೆಳಗಿನ 6ರಿಂದ ರಾತ್ರಿ 7ಗಂಟೆಯವರೆಗೆ ಯಾವೊಬ್ಬ ಮಹಿಳೆಯು ನೈಟಿ ಧರಿಸುವ ಹಾಗಿಲ್ಲ.
ತೋಕಲಪಲ್ಲಿ ಗ್ರಾಮದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಕಾನೂನು ಬಾಹಿರವೆಂದು ಪೊಲೀಸರು ತಿಳುವಳಿಕೆ ನೀಡಿದರೂ ಗ್ರಾಮದ ಜನರು ಅದಕ್ಕೆ ಒಪ್ಪುತ್ತಿಲ್ಲ. 5ಸಾವಿರ ಜನಸಂಖ್ಯೆಯಿರುವ ಇಲ್ಲಿ ಸುಮಾರು 2ವರೆ ಸಾವಿರ ಮಹಿಳೆಯರಿದ್ದಾರೆ.