ಹುಬ್ಬಳ್ಳಿಯಲ್ಲಿ ಕುತ್ತಿಗೆಗೆ ಬಿತ್ತು ಮಾಂಜಾ ಗುನ್ನ…!
1 min readಹುಬ್ಬಳ್ಳಿ: ಲಾಕ್ ಡೌನ್ ರಿಲೀಫ್ ಸಿಕ್ಕ ತಕ್ಷಣವೇ ಗಾಳಿಪಟ ಹಾರಿಸುವವರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಬಳಸುವ ದಾರದಿಂದ ಸಾಕಷ್ಟು ತೊಂದರೆಗಳು ನಡೆಯುತ್ತಿವೆ.
ಹುಬ್ಬಳ್ಳಿ ವಿಕಾಸನಗರದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಶ್ರೀಧರ ಕಲಬುರ್ಗಿ ಎನ್ನುವವರ ಕುತ್ತಿಗೆಗೆ ತಾಗಿದೆ. ಇದರಿಂದ ತೀವ್ರ ಥರದ ರಕ್ತಸ್ರಾವವಾಗಿದ್ದು, ಅವರಿಗೆ ನಾಲ್ಕು ಹೊಲಿಗೆಗಳನ್ನ ಹಾಕಲಾಗಿದೆ.
ಗಾಳಿಪಟ ಹಾರಿಸಲು ಮಾಂಜಾ ದಾರವನ್ನ ಬಳಕೆ ಮಾಡುತ್ತಿರುವುದು ಹೆಚ್ಚಾಗಿದೆ. ಇದೇ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿದ್ದು, ಸಂಬಂಧಿಸಿದವರು ಇದಕ್ಕೆ ಕಡಿವಾಣ ಹಾಕಬೇಕಿದೆ.
ಶ್ರೀಧರ ಕಲಬುರ್ಗಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಮಾಂಜಾ ದಾರ ಬಳಕೆ ಮಾಡಿದವರ ಬಗ್ಗೆ ಮಾಹಿತಿಯನ್ನ ಪೊಲೀಸರಿಗೆ ನೀಡಿದ್ದಾರೆಂದು ಹೇಳಲಾಗಿದೆ.