ಕಾನ್ಪುರದ ಗಬ್ಬರ್ ಎನ್ ಕೌಂಟರ್: ನಿನ್ನೆ ಬಂಧನ-ಇವತ್ತು ಬಿತ್ತು ಗುಂಡು
ಲಕ್ನೋ: ಐದು ದಿನಗಳ ಹಿಂದೆ ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಎಂಟು ಪೊಲೀಸರನ್ನು ಗುಂಡಿಕ್ಕಿ ತಲೆಮರೆಸಿಕೊಂಡಿದ್ದ ಪಾತಕಿ ವಿಕಾಸ ದುಬೆ ಇಂದು ಬೆಳಗಿನ ಜಾವ ಪೊಲೀಸ್ ಎನ್ ಕೌಂಟರನಲ್ಲಿ ಹತನಾಗಿದ್ದಾನೆ.
ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜೇನಿಯ ಮಹಾಕಾಲ ದೇವಸ್ಥಾನದಲ್ಲಿ ಪ್ರಾರ್ಥನೆಗೆ ಬಂದಿದ್ದ ವೇಳೆಯಲ್ಲಿ ಆತನ ಪತ್ತೆ ಹಚ್ಚಿ ಬಂಧನ ಮಾಡಲಾಗಿತ್ತು. ವಿಚಾರಣೆಗೆ ಕರೆದುಕೊಂಡು ಹೋಗುವಾಗ ವಿಕಾಸ ದುಬೆ, ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ ಸಮಯದಲ್ಲೇ ಗುಂಡಿಟ್ಟು ಎನ್ ಕೌಂಟರ್ ಮಾಡಲಾಗಿದೆ.
ಯುಪಿಯ ಗಬ್ಬರ ಎಂದೇ ಕುಖ್ಯಾತಿ ಪಡೆದಿದ್ದ ವಿಕಾಸ ದುಬೆ, ಯಾವ ಪಕ್ಷದ ಸಹಾಯ ಪಡೆದು ಹೀಗೇಲ್ಲ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ಹೊರಗೆ ಬರಬೇಕಾಗಿತ್ತು. ಆತನಿಗೆ ಬೆಂಬಲ ನೀಡುತ್ತಿದ್ದ ಪ್ರಮುಖರ ಹೆಸರುಗಳು ಹೊರಗೆ ಬರಬೇಕೆಂದು ಬಹುತೇಕರು ನಿರೀಕ್ಷೆ ಮಾಡಿದ್ದರು. ಆದರೆ, ಅದೇಲ್ಲವೂ ಎನ್ ಕೌಂಟರ್ ನಲ್ಲಿ ಮುಳಗಿ ಹೋದಂತಾಗಿದೆ.