ತಿಳಿಗೇಡಿತನ ಹೇಳಿಕೆ ಕೊಡಬೇಡಿ: ಡಿಕೆಶಿಗೆ ಟ್ವೀಟ್ ಲ್ಲೇ ಡಿಚ್ಚಿ ಕೊಟ್ಟ ವಿಜಯೇಂದ್ರ
ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆಜಿ ಹಳ್ಳಿಯ ಪುಂಡಾಟಿಕೆಯ ಬಗ್ಗೆ ಕೆಲವೇ ಗಂಟೆಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿಕೆಯನ್ನ ಬಲವಾಗಿ ಟೀಕಿಸಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಗೇಡಿತನದ ಹೇಳಿಕೆ ಕೊಡಬೇಡಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರನ್ನ ತರಾಟೆಗೆ ತೆಗೆದುಕೊಂಡಿರುವ ವಿಜಯೇಂದ್ರ, ನಿಮ್ಮದೇ ಶಾಸಕರ ಮೇಲೆ ಹಲ್ಲೆ ನಡೆದರು ನಿಮ್ಮ ವಿಚಾರವೇ ಬೇರೆಯಾಗಿದೆಯಲ್ಲ ಎಂದಿದ್ದಾರೆ.
ಟ್ವೀಟ್ ಹೀಗಿದೆ ನೋಡಿ
“ಅಂದು ತನ್ವೀರ್ ಸೇಠ್,ಇಂದು ಅಖಂಡ ಶ್ರೀನಿವಾಸ ಮೂರ್ತಿ”ಕಾಂಗ್ರೆಸ್ ತಾನೇ ಗೊಬ್ಬರ ಹಾಕಿ ಪೋಷಿಸಿ,ರಕ್ಷಿಸಿದ SDPI,PFIಎಂಬ ಒಂದೇ ಮುಖದ ವಿಧ್ವಂಸಕ ಸಂಘಟನೆಗಳು ಇಂದು ಕಾಂಗ್ರೆಸ್ ಶಾಸಕರುಗಳನ್ನೇ ಬಲಿ ತೆಗೆದುಕೊಳ್ಳಬೇಕೆಂಬಷ್ಟರ ಮಟ್ಟಿಗೆ ಭಯೋತ್ಪಾದನೆ ಸೃಷ್ಟಿಸುತ್ತಿದ್ದರೂ ಕಾಂಗ್ರೆಸ್ ಇನ್ನೂ ಈ ಸಂಘಟನೆಗಳ ವಿರುದ್ಧ ಸೊಲ್ಲೆತ್ತುತ್ತಿಲ್ಲವೇಕೆ?
ಪೊಲೀಸ್ ಠಾಣೆ, ಶಾಸಕರ ಮನೆಗೆ ಬೆಂಕಿ ಹಚ್ಚಿದ ಗಲಭೆಕೋರರನ್ನು ಕಟುವಾಗಿ ಖಂಡಿಸುವ ಬದಲು ಕೆಪಿಸಿಸಿ ಅಧ್ಯಕ್ಷರು ಮುಖ್ಯವಿಷಯ ಕೈಬಿಟ್ಟು, ಒಬ್ಬವ್ಯಕ್ತಿಯ ರಾಜಕೀಯ ಬೆಂಬಲ ಯಾರಿಗಿದೆ ಎಂದು ಕೆದಕಲು ಹೊರಟಿರುವುದು ಏಕೆ? ಯಾರನ್ನು ರಕ್ಷಿಸಲು ಈ ಕೀಳು ಪ್ರಯತ್ನ? ಇಂಥ ಸೂಕ್ಷ್ಮ ವಿಷಯಗಳಲ್ಲಿ ತಿಳಿಗೇಡಿತನದ ಮಾತುಗಳು ಸೂಕ್ತವಲ್ಲ
@DKShivakumar
ರವರೇ!