ಕೋಟ್ಯಾಂತರ ರೂ. ವಂಚನೆ- ಸಚಿವ ಮುರುಗೇಶ ನಿರಾಣಿ ಪುತ್ರನ ವಿರುದ್ಧ ಎಸಿಬಿಗೆ ದೂರು…!
1 min readಮೈಸೂರು: ಪಾಂಡವಪುರ ಸಕ್ಕರೆ ಕಾರ್ಖಾನೆಯ ವಿಚಾರವಾಗಿ ಸಚಿವ ಮುರುಗೇಶ್ ನಿರಾಣಿ ಪುತ್ರನ ವಿರುದ್ದ ಮೈಸೂರಿನ ಎಸಿಬಿ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಡಾ.ಹೆಚ್.ಎನ್. ರವೀಂದ್ರ ದೂರು ದಾಖಲು ಮಾಡಿದ್ದಾರೆ.
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನ ಸದ್ಯ ಗುತ್ತಿಗೆಗೆ ಪಡೆದಿರುವ ವಿಜಯ್ ನಿರಾಣಿ ಸರ್ಕಾರದ ಗುತ್ತಿಗೆ ನಿಯಮಗಳನ್ನ ಉಲ್ಲಂಘನೆ ಮಾಡಿ ಕೋಟ್ಯಾಂತರ ರೂಪಾಯಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಗುತ್ತಿಗೆ ಕರಾರು ನೋಂದಣಿಯಾಗಿಲ್ಲ. 90 ದಿನದಲ್ಲಿ ನೋಂದಾಣಿಯಾಗಬೇಕಿತ್ತು. ಮುಂಗಡ ಹಣ 20 ಕೋಟಿ ಸರ್ಕಾರಕ್ಕೆ ನೀಡಿಲ್ಲ. ಕಳೆದ ವರ್ಷವೇ ಈ ಹಣವನ್ನು ಪಾವತಿಸಬೇಕಿತ್ತು. ನಿಯಮ ಪಾಲಿಸದಿದ್ದರೆ ಕ್ರಮಕ್ಕೆ ಅವಕಾಶ. ಸಚಿವರ ಪುತ್ರ ಅನ್ನೋ ಕಾರಣಕ್ಕೆ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ಕ್ರಮಕೈಗೊಳ್ಳುವಂತೆ ಎಸಿಬಿಗೆ ದೂರು ನೀಡಿರುವುದಾಗಿ ಹೇಳಿದರು.
ಮಂಡ್ಯ ಜಿಲ್ಲಾಧಿಕಾರಿಗೆ ಎಸ್ ಪಿಗೂ ದೂರು ಪ್ರತಿಯನ್ನ ಸಲ್ಲಿಸಲಾಗಿದ್ದು. ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ದೂರುದಾರ ಡಾ. ರವೀಂದ್ರ ಎಚ್ಚರಿಕೆ ನೀಡಿದರು.