ಗುಮ್ಮಟನಗರಿಯಲ್ಲಿ ಪೊಲೀಸಪ್ಪನ ಭ್ರಷ್ಟಾಚಾರ: ವೀಡೀಯೋ ವೈರಲ್: ಮಾನ ಹರಾಜು
1 min readವಿಜಯಪುರ: ಜಿಲ್ಲೆಯಲ್ಲಿ ನಡೆಸುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಜನರ ನೆಮ್ಮದಿ ಉಳಿಸಬೇಕಾದವರೇ, ಪೊಲೀಸರು ಮಾತ್ರ ವಿಜಯಪುರವೇ ತಲೆ ತಗ್ಗಿಸೊ ಕೆಲಸವನ್ನ ಮಾಡಿದ್ದಾರೆ.
ಅಕ್ರಮ ದಂಧೆಕೋರರು ನೀಡೊ ಎಂಜಲಾಸೆಗೆ ಬಾಯಿತೆರೆದು ಆರಕ್ಷಕರೇ ವಸೂಲಿ ದಂಧೆಗಿಳಿದಿದ್ದಾರೆ. ವಿಜಯಪುರದ ಕಾನ್ಸಟೇಬಲ್ ಒಬ್ಬರು ಭರ್ಜರಿ ಡೀಲ್ ನಡಿಸ್ತಿದ್ದು, ಪೊಲೀಸನ ಈ ವಸೂಲಿ ದಂಧೆ ವೈರಲ್ ಆಗಿದೆ. ವಿಜಯಪುರದ ಗೋಲ್ ಗುಂಬಜ್ ಪೊಲೀಸ್ ಠಾಣೆಯ ಕಾನ್ಸಟೇಬಲ್‍ನ ಲಂಚವತಾರ ಸಾಕ್ಷಿ ಸಮೇತವಾಗಿ ಸಿಕ್ಕಿ ಬಿದ್ದಿದೆ. ಗೋಲ್ ಗುಂಬಜ್ ಪೊಲೀಸ್ ಠಾಣೆಯ ಕಾನ್ಸಟೇಬಲ್ ದುಂಡಪ್ಪ ಪಾಟೀಲ್ ಭರ್ಜರಿ ಡೀಲ್ ನಡಿಸ್ತಾ ಇರೊದು. ಅಕ್ರಮ ದಂಧೆ ನಡೆಸುವವನೊಂದಿಗೆ ಡೀಲ್ ಮುಗಿಸೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಡುಹಗಲೇ ಸಾರ್ವಜನಿಕ ಸ್ಥಳದಲ್ಲಿನೆ ಡೀಲ್ ಮುಗಿಸುತ್ತಾರೆ ಈ ಪಾಟೀಲ್ ಪೊಲೀಸ್. ಅಕ್ರಮ ದಂಧೆಕೋರರು ಈ ಪೊಲೀಸನ ವೈರಿ ಅಲ್ವಂತೆ. ಅಕ್ರಮ ದಂಧೆನ ಎಲ್ಲಿ ಬೇಕಾದ್ರೂ ನಡೆಸು, ಆದ್ರೆ ಹೊರಗೆ ಮಾತ್ರ ಅಕ್ರಮ ದಂಧೆಯ ವಾಸನೆ ಬರಬಾರದು. ಹೀಗಂತ ಪೊಲೀಸನೆ ಸಾರಾಸಗಟಾಗಿ ಹೇಳಿದ್ದಾನೆ ನೋಡಿ. ಕೇಳಿದ್ರಲಾ ಈ ಅಕ್ರಮ ದಂಧೆಕೋರರಿಗೆ ಈ ಪೊಲೀಸನದ್ದು ಅಂದೆಂತ ರಕ್ಷನೆ ಇದೆಯಂತಾ. ಅಧಿಖಾರಿಗಳು ದಾಳಿ ನಡೆಸೊದನ್ನ ದಂಧೆಕೊರರಿಗೆ ಮೊದಲೆ ಇನ್ ಫಾರ್ಮ ಮಾಡಾತಾರಂತೆ ಈ ಕಾನ್ಸ ಟೇಬಲ್. ಆದ್ರೆ ಇವನ ಹೆಸರು ಮಾತ್ರ ಎಲ್ಲೂ ಆಚೆ ಬರಬಾರದು. ಅಕ್ರಮವಾಗಿ ದುಡ್ಡು ಮಾಡೊದಕ್ಕೆ ವಾರಕ್ಕೆ ಇವನಿಗೆ 5000 ಕೊಡಬೇಕಂತೆ. ಇನ್ನೂ ದಂಧೆಕೋರರ ಮೇಲಿನ ಕೇಸ್ ಮುಚ್ಚಿ ಹಾಕೊಕೆ ಮತ್ತಷ್ಟು ಹಣ ವಸೂಲಿ ಮಾಡ್ತಾನಂತೆ ಈ ಕಾನ್ಸ ಟೇಬಲ್.
ದಾಳಿ ಮಾಡೊದನ್ನ ಮೊದಲೇ ಹೇಳಿದ್ರೆ ದಂಧೆಕೋರನು ಅಕ್ರಮ ದಂಧೆಯನ್ನ ಅಧಿಕಾರಿಗಳು ಬರೊ ವೇಳೆಗೆ ಎಲ್ಲ ಖಾಲಿ ಮಾಡಿಸಿರ್ತಾನಂತೆ. ಇದಕ್ಕೆ ಪೊಲೀಸನಿಗೆ ವಾರಕ್ಕೆ 10000 ಬೇಕಾದ್ರೂ ತಂದು ಕೊಡ್ತಾನಂತೆ. ಪಾಪ ಈ ಪೊಲೀಸನಿಗೆ ದಾಳಿ ನಡೆಸುವುದನ್ನ ತಡೆಯೋಕೆ ಆಗಲ್ವಂತೆ ಅದಕ್ಕೆ ದಾಳಿ ಮಾಡೊದನ್ನ ಮೊದಲೆ ಹೇಳಿ, ಅಧಿಕಾರಿಗಳು ಹೊಗುವಷ್ಟರಲ್ಲಿ ಖಾಲಿ ಮಾಡಿಸ್ತಾನಂತೆ. ಇದಕ್ಕೆ ಇವನಿಗೆ ವಾರಕ್ಕೆ 5000 ರೂ ಯಂತೆ ದಂಧೆ ನಡೆಸುವವರಿಂದ ಪೀಕಿಸುತ್ತಾನೆ.
ವಿಜಯಪುರದ್ಲಲಿ ಈ ರೀತಿ ಅಕ್ರಮ ದಂಧೆ ನಡೆಸುವವರು, ಹಾಗೆ ಇವರಿಗೆ ಕುಮ್ಮಕ್ಕು ಕೊಡುವವರು ಕೂಡ ಜಿಲ್ಲೆಯಲ್ಲಿ ಇನ್ನೂ ಅನೇಕರಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಲಂಚ ಕೋರರನ್ನ ಹಾಗೂ ಅಕ್ಮಮ ದಂಧೆಗಳನ್ನ ಸಾಕಿ ಸಮೇತ ಬಯಲಾಗಿದೆ.