ವಿಜಯಪುರ ಲಾಕ್‌ಡೌನ್ ಯಾವುದೇ ಕಾರಣಕ್ಕೂ ಮಾಡಲ್ಲ ಅಂದ್ರು ಡಿಸಿಎಂ ಕಾರಜೋಳ
ವಿಜಯಪುರ: ರೆಡ್ ಝೋನ್‌ನಿಂದ ಹೊರಗುಳಿದ ವಿಜಯಪುರಕ್ಕಿಲ್ಲ ಲಾಕಡೌನ್ ಭೀತಿ. ಲಾಕಡೌನ್‌ನಿಂದ ಹೊರಗುಳಿದ ವಿಜಯಪುರ ಜಿಲ್ಲೆ. ವಿಜಯಪುರ ರೆಡ್ ಝೋನ್ ನಲ್ಲಿ ಇಲ್ಲ. ವಿಜಯಪುರ ಜಿಲ್ಲೆಯನ್ನ ಯಾವುದೇ ಕಾರಣಕ್ಕೂ ಲಾಕಡೌನ್ ಮಾಡಲ್ಲ ಎಂದು ವಿಜಯಪುರದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ವಿಜಯಪುರ ಪೂರ್ತಿ ಜಿಲ್ಲೆ ಲಾಕಡೌನ್ ಇಲ್ಲ. ಕೊರೋನಾ ಪ್ರಕರಣಗಳು ಹೆಚ್ಚಾದ್ರೆ, ಹೆಚ್ಚಾದಂತಹ ಏರಿಯಾ ಅಥವಾ ವಾರ್ಡ್ ಅಷ್ಟೆ ಲಾಕಡೌನ್ ಮಾಡಲಾಗುವುದು. ನಾವೆಲ್ಲರೂ ಕೊರೋನಾದೊಂದಿಗೆ ಬದುಕಬೇಕಿದೆ. ಸಂಜೆಗೆ ಸಿಎಂ ಸಭೆ ನಡೆಯಲಿದೆ, ನಾವೆಲ್ಲರೂ ಕಾನ್ಪರೆನ್ಸ್ ನಲ್ಲಿ ಭಾಗವಹಿಸಲಿದ್ದೇವೆ. ಡಿಸಿಗಳು ಕೊಟ್ಟ ವರದಿ ಆಧಾರದ ಮೇಲೆ ಸಿಎಂ ನಿರ್ಧರಿಸಲಿದ್ದಾರೆ. ಲಾಕಡೌನ್ ವಿಚಾರ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದರು.