‘ರಾಂಕಾ ಸ್ಟೆಲ್ಲಾ’- “ಬೆಳ್ಳುಬ್ಬಿ ಒಂಟಿ ಕಳ್ಳ”ನ ಬಂಧನ
1 min readಧಾರವಾಡ: ವಿಜಯಪುರದಿಂದ ಬಂದು ಕಳ್ಳತನ ಮಾಡಿ ಮತ್ತೆ ತನ್ನದೇ ಪ್ರದೇಶಕ್ಕೆ ಹೋಗುತ್ತಿದ್ದ ಒಂಟಿ ಕಳ್ಳನನ್ನ ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ವಿಜಯಪುರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಅಜಿತ ಭೀಮಪ್ಪ ಚಲವಾದಿ ಎಂದು ಗುರುತಿಸಲಾಗಿದ್ದು, ಧಾರವಾಡದ ಬಾರಾಕೊಟ್ರಿ ರಸ್ತಿಯಲ್ಲಿನ ರಾಂಕಾ ಸ್ಟೆಲ್ಲಾ ಅಪಾರ್ಟಮೆಂಟಿನಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ.
ಬಂಧಿತನಿಂದ ಅಜಿತನಿಂದ 2ವರೆ ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ಬಂಗಾರವನ್ನ ವಶಕ್ಕೆ ಪಡೆಯಲಾಗಿದೆ. ಅಪಾರ್ಟಿಮೆಂಟಿನ ಮನೆಯಲ್ಲಿ ಕೀಲಿ ಮುರಿದು ಕಳ್ಳತನ ಮಾಡಿದ್ದ ಅಜಿತ.
ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಎಂ.ಕೆ.ಬಸಾಪುರ ನೇತೃತ್ವದಲ್ಲಿ ಪಿಎಸ್ಐ ಸಚಿನಕುಮಾರ ದಾಸರಡ್ಡಿ, ಎಸ್.ಆರ್.ತೇಗೂರ, ಎಎಸ್ಐ ಬಿ.ಎಂ.ಅಂಗಡಿ, ಸಿಬ್ಬಂದಿಗಳಾದ ಎ.ಬಿ.ನರೇಂದ್ರ, ಎಂ.ಎಫ್.ನದಾಫ, ಐ.ಪಿ.ಬುರ್ಚಿ, ಆರ್.ಕೆ.ಅತ್ತಾರ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ, ಎಂ.ಜಿ.ಪಾಟೀಲ, ಡಿ.ಎಸ್.ಸಾಂಗ್ಲಿಕರ, ಎ.ಎಂ.ಹುಯಿಲಗೋಳ, ಹೆಚ್.ಕೆ.ಗೂಡುನಾಯ್ಕರ, ಬಸವರಾಜ ಸವಣೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.