ದೇಶದಲ್ಲೇ ಇಲ್ಲದ ವಿದ್ಯಾಗಮ ರಾಜ್ಯದಲ್ಲಿ ಬೇಕಾ.. ‘ವಿದ್ಯಾಗಮಕ್ಕೆ’ ವಿಶ್ರಾಂತಿ ಕೊಡಿ ‘ವಿದ್ಯಾ ಸಚಿವರೇ’…!
ಹುಬ್ಬಳ್ಳಿ: ಕೊರೋನಾ ಹಾವಳಿಯಿಂದ ನಲುಗುತ್ತಿರುವ ಶಿಕ್ಷಕ ವಲಯದಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿದ್ದು, ದೇಶದಲ್ಲಿಯೇ ಇಲ್ಲದ ವಿದ್ಯಾಗಮ ಯೋಜನೆ ರಾಜ್ಯದಲ್ಲಿ ಮುಂದುವರೆಯುವುದು ಬೇಕಾ ಎಂಬ ಪ್ರಶ್ನೆ ಹೆಚ್ಚಾಗಿ ಮೂಡಿ ಬರುತ್ತಿದೆ. ಅದಕ್ಕೆ ಕಾರಣವೂ ಅನೇಕವಾಗಿದ್ದು, ಶಿಕ್ಷಣ ಸಚಿವ ಸುರೇಶಕುಮಾರ ಈ ಬಗ್ಗೆ ಗಮನ ಹರಿಸಬೇಕಿದೆ.
ಉತ್ತರವಿಲ್ಲದ ಪ್ರಶ್ನೆಗಳಿಗೆ ಸಚಿವರ ಬಳಿಯಾದರೂ…!
ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ರೌದ್ರನರ್ತನದ ನಡುವೆಯೇ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯನ್ನ ಆರಂಭಿಸಿತು. ಈ ಯೋಜನೆಯ ಪ್ರಕಾರ ಶಿಕ್ಷಕರು ತಾವೂ ಕಲಿಸುವ ಗ್ರಾಮಗಳಿಗೆ ಹೋಗಿ, ಅಲ್ಲಿರುವ ಮಠ, ಮಂದಿರ, ಖಾಲಿ ಜಾಗೆಗಳಲ್ಲಿ ಆಯಾ ಪ್ರದೇಶದ ಮಕ್ಕಳಿಗೆ ಪಾಠವನ್ನ ಹೇಳಿಕೊಟ್ಟು ಬರುವುದಾಗಿತ್ತು.
ಈ ಯೋಜನೆ ಹಲವು ತೊಂದರೆಗಳನ್ನ ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಬಹುತೇಕ ಗ್ರಾಮಗಳಿಗೆ ಹೋಗಲು ವಾಹನದ ಸೌಕರ್ಯವೂ ಇಲ್ಲದ ಹಾಗಾಗಿದ್ದರಿಂದ ಶಿಕ್ಷಕರು ಬದಲಿ ವ್ಯವಸ್ಥೆ ಮಾಡಿಕೊಂಡು, ಮಕ್ಕಳಿಗೆ ಶಿಕ್ಷಣವನ್ನ ಕೊಡಲು ಆರಂಭಿಸಿದ್ರು. ಅಲ್ಲಿಂದ ಶುರುವಾಗಿದ್ದೇ ಬೇರೆ ಥರದ ಸಮಸ್ಯೆಗಳು.
ಕೊರೋನಾ ವೈರಸ್ ನಿಂದ ತಪ್ಪಿಸಿಕೊಳ್ಳಲು ಶಿಕ್ಷಕರು ಮಾಸ್ಕ್ ಧರಿಸಿಕೊಂಡು ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಿದ್ದರೂ ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಲವು ಶಿಕ್ಷಕರು ಕೊರೋನಾಗೆ ತತ್ತರಿಸಿ ಹೋಗಿದ್ದಾರೆ. ಕೆಲವರಂತೂ ಪ್ರಾಣವನ್ನ ಕಳೆದುಕೊಳ್ಳುವಂತಾಗಿದೆ ಎಂಬುದು ಶಿಕ್ಷಣ ಇಲಾಖೆಗೆ ಗೊತ್ತೆಯಿದೆ.
ಪ್ರತಿದಿನವೂ ರಾಜ್ಯವೂ ಸೇರಿದಂತೆ ಎಲ್ಲಡೆಯೂ ಕೊರೋನಾ ವೈರಸ್ ತನ್ನ ಬಾಹುಬಂಧನವನ್ನ ಹೆಚ್ಚು ಮಾಡುತ್ತಿದೆ. ಈಗಲಾದರೂ ಶಿಕ್ಷಣ ಸಚಿವರು ಈ ಬಗ್ಗೆ ಸೂಕ್ತವಾದ ನಿರ್ಧಾರವನ್ನ ತೆಗೆದುಕೊಳ್ಳಬೇಕಿದೆ. ವಿದ್ಯಾಗಮ ಯೋಜನೆ ದೇಶದ ಯಾವುದೇ ರಾಜ್ಯದಲ್ಲಿ ನಡೆಯುತ್ತಿಲ್ಲ ಎಂಬುದನ್ನ ಗಮನಿಸಿಯಾದರೂ, ಇದನ್ನ ಕೈಬಿಡಿ ಎಂದು ಶಿಕ್ಷಕರು ಅಲವತ್ತುಕೊಳ್ಳುವಂತಾಗಿದೆ. ಶಿಕ್ಷಣ ಸಚಿವರೇ ಇದಕ್ಕೆ ಉತ್ತರ ನೀಡಬೇಕಿದೆ.