ವಿದ್ಯಾಗಮ ಯೋಜನೆ ಎಷ್ಟೊಂದು ಭಯಾನಕ ನೋಡಿ.. ಮರದ ಕೆಳಗೆ ಮಕ್ಕಳು- ಮರದಲ್ಲಿ ಹಾವೂ..!
ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯು ಸರಾಗವಾಗಿ ನಡೆಯತ್ತಿದೆಯಾದರೂ, ಮಕ್ಕಳು, ಶಿಕ್ಷಕರು ಸೇಫಲ್ಲ ಎನ್ನುವ ಘಟನೆಯೊಂದು ನಡೆದಿದ್ದು, 10 ಅಡಿ ಉದ್ದದ ಹಾವೊಂದು ಮರದಲ್ಲಿ ತಿರುಗಿ ಆತಂಕ ಸೃಷ್ಟಿ ಮಾಡಿದೆ.
ಹೇಗಿತ್ತು ನೋಡಿ ಹಾವಿನ ಸಂಚಾರ
https://www.youtube.com/watch?v=vziaiEGL0zM&t=2s
ಜಿಲ್ಲೆಯ ಚಿಕ್ಕಸೂಗುರು ಕ್ಲಷ್ಟರಲ್ಲಿ ನಡೆದಿರುವ ಈ ಘಟನೆ ಕೆಲಕಾಲ ಗೊಂದಲವನ್ನ ಸೃಷ್ಟಿ ಮಾಡಿತ್ತು. ವಿದ್ಯಾರ್ಥಿಗಳು ಹಾವನ್ನ ನೋಡಿ ಭಯದಿಂದ ಅಲ್ಲಿಂದ ಹೋಗಿದ್ದು, ಶಿಕ್ಷಕರು ಕೂಡಾ ಆತಂಕದಿಂದ ಸಮಯ ಕಳೆಯಬೇಕಾಯಿತು.
ಯಾವುದೇ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳದೇ ಆರಂಭಿಸಿರುವ ವಿದ್ಯಾಗಮ ಯೋಜನೆಯ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸರಕಾರದ ಸ್ಪಷ್ಟ ನಿರ್ಧಾರವಿಲ್ಲದಿರುವುದೇ ಇದಕ್ಕೇಲ್ಲ ಕಾರಣವೆನ್ನಲಾಗಿದೆ.