“ರಜತ” ಹೆಸರಿಗೆ “ಮಸಿ” ಬಳಿಯಲು ನಕಲಿ ವೀಡಿಯೋ ರಿಲೀಸ್…!!!

ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ರಜತ ಉಳ್ಳಾಗಡ್ಡಿಮಠ ಅವರ ಹೆಸರಿಗೆ ಕಳಂಕ ತರುವ ಯತ್ನವೊಂದಕ್ಕೆ ವಿರೋಧಿ ಟೀಂ ಷಡ್ಯಂತ್ರ ರೂಪಿಸಿದ್ದು, ಅದಕ್ಕಾಗಿಯೇ ವೀಡಿಯೋಗೆ ಫೇಕ್ ಆಡೀಯೋ ಸೇರಿಸಿ, ಇಂಟರ್‌ನೆಟ್ ಮೂಲಕ ಮಾಧ್ಯಮದವರಿಗೆ ಕಳಿಸಲಾಗುತ್ತಿದೆ.
ಅಸಲಿ ವೀಡಿಯೋಗೆ ನಕಲಿ ಧ್ವನಿ ಸೇರಿಸಿರುವ ವೀಡಿಯೋ ಇಲ್ಲಿದೆ ನೋಡಿ..
https://youtu.be/etanprnurac
ಕಳೆದ ಕೆಲವು ತಿಂಗಳುಗಳಿಂದ ಮಾಧ್ಯಮದ ಇಬ್ಬರು ವ್ಯಕ್ತಿಗಳು ಸೇರಿದಂತೆ ಪ್ರಮುಖ ರಾಜಕಾರಣಿಯೋರ್ವ ಈ ಷಡ್ಯಂತ್ರ ಮಾಡಿದ್ದು, ಅದಕ್ಕಾಗಿಯೇ ಹಣದ ಬೇಡಿಕೆಯನ್ನೂ ಇಟ್ಟಿದ್ದರೆಂದು ಹೇಳಲಾಗುತ್ತಿದೆ. ಯಾವುದೇ ವಿವಾದಗಳಿಲ್ಲದೇ ಪಕ್ಷದ ಸಂಘಟನೆಯಲ್ಲಿ ಮುಳುಗಿರುವ ರಜತ ಉಳ್ಳಾಗಡ್ಡಿಮಠ, ಇದ್ಯಾವುದಕ್ಕೂ ಕ್ಯಾರೇ ಅಂದಿರಲಿಲ್ಲ. ಹೀಗಾಗಿ ವೀಡಿಯೋಗೆ ನಕಲಿ ಆಡೀಯೋ ಸೇರಿಸಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ರಜತ ಅವರು ದೂರು ನೀಡಲು ಮುಂದಾಗಿದ್ದಾರೆಂದು ಗೊತ್ತಾಗಿದೆ.